ಈ ರೈತನಿಗೆ ಪೋಲೀಸ್ ಪೇದೆ ಎದೆಗೆ ಒದ್ದರು. ಹಿಗ್ಗಾ ಮುಗ್ಗಾ ಥಳಿಸಿದರು . ಕಾರಣವೇನು ಗೊತ್ತಾ?

ಅಮಾಯಕ ರೈತನ ಮೇಲೆ ಪೊಲೀಸ್ ದೌರ್ಜನ್ಯ…ಬೈಕ್ ಕಳ್ಳತನ ಒಪ್ಪಿಕೊಳ್ಳುವಂತೆ ರೈತನಿಗೆ ಥಳಿತ….ಬೂಟಿನಿಂದ ಎದೆಗೆ ಒದ್ದಿರೋ ಪೊಲೀಸ್ ಪೇದೆ…..ಗದಗ ಶಹರ ಠಾಣೆಯ ಪೇದೆ ಯಲ್ಲಪ್ಪನ ವಿರುದ್ಧ ಗಂಭೀರ ಆರೋಪ….ರೈತನ ಸ್ಥಿತಿ ಗಂಭೀರ…. ಹುಬ್ಬಳ್ಳಿ ಕಿಮ್ಸ್ ಗೆ ರವಾನೆ….

ad   

ಬೈಕ್ ಕಳ್ಳತನ ಮಾಡಿರೋದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿ ಪೊಲೀಸರು ರೈತನ ಮೇಲೆ ದೌರ್ಜನ್ಯ ನಡೆಸಿರೋ ಘಟನೆ‌ ಗದಗ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ನಗರ ಠಾಣೆಯ ಪೊಲೀಸ್ ಪೇದೆ ಯಲ್ಲಪ್ಪ ಎಂಬಾತ ಹುಯಿಲಗೋಳ ಗ್ರಾಮದ ರೈತ ಈರಪ್ಪ ಹೊಸಳ್ಳಿಗೆ ಕಳ್ಳತನ ಒಪ್ಪಿಕೊಳ್ಳುವಂತೆ ಒತ್ತಾಯಿಸಿ ಎದೆಗೆ ಬೂಟಿನಿಂದ ಒದ್ದಿರೋ ಆರೋಪ ಎದುರಿಸುತ್ತಿದ್ದಾನೆ. ಪೇದೆಯ ಹೊಡೆತಕ್ಕೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ರೈತ ಈರಪ್ಪ ನರಳಾಡುತ್ತಿದ್ದಾನೆ.

ತನಗೆ ಸಂಬಂಧವಿಲ್ಲದ, ಬೈಕ್ ಕಳ್ಳತನ ಒಪ್ಪಿಕೊಳ್ಳುವಂತೆ ಪೇದೆ ಥಳಿಸಿದ್ದಾನೆ ಎಂದು ಈರಪ್ಪನ ಸಂಬಂಧಿಗಳು ಆರೋಪಿಸಿದ್ದಾರೆ. ಜುಲೈ ೨೩ ರಂದು ಈರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಬೂಟಿನೇಟಿನಿಂದ ತೀವ್ರ ಎದೆ ನೋವಿನಿಂದ ಬಳಲುತ್ತಿರುವ ಈರಪ್ಪ‌ ಹೊಸಳ್ಳಿಗೆ, ಜಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.