ಮುಳ್ಳಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೃದ್ಧೆಯನ್ನು ರಕ್ಷಿಸಿದ ಪೋಲೀಸರಿಗೊಂದು ಸಲಾಂ!!

ಊಟ, ನೀರು ಇಲ್ಲದೇ ಮುಳ್ಳಿನ ಗಿಡದಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ದೆಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸೋ ಮೂಲಕ ಮಾನವೀಯತೆ ಮೆರೆದಿರೋ ಘಟನೆ ಗದಗ ನಗರದ ಬೆಟಗೇರಿಯ ಸೆಟ್ಲಮೆಂಟ್ ಬಸ್ ನಿಲ್ದಾಣದ ಬಳಿ ನಡೆದಿದೆ. ನಿನ್ನೆ ರಾತ್ರಿ ಮುಳ್ಳಿನ ಗಿಡದಲ್ಲಿ ಬಿದ್ದು ಓಡಾಡೋ ಸ್ಥಿತಿಯಲ್ಲೂ ಇಲ್ಲದ ಈ ವೃದ್ದೆಯ ಕುರಿತು ಸ್ಥಳೀಯರು ಬೆಟಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಕೂಡಲೇ ಸ್ಥಳಕ್ಕೆ ಬಂದ ಪಿಎಸ್ಐ ಮಲ್ಲಪ್ಪ. ಮಡ್ಡಿ ಹಾಗೂ ಸಿಬ್ಬಂದಿ ಕೂಡಲೇ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ವೃದ್ದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಸ್ವಸ್ಥ ವೃದ್ದೆ ಮಾತಾಡೋ ಸ್ಥಿತಿಯಲ್ಲಿಯೂ ಸಹ ಇಲ್ಲದ ಕಾರಣ ಆಕೆಯ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸದ್ಯ ಆಕೆಯನ್ನು ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.