ರೇಪ್ ವಿಡಿಯೋ ಸಂತ್ರಸ್ತೆಯ ಗಂಡನಿಗೆ ಗಿಫ್ಟ್- ಇದು ಕೋಲಾರ ಕಿರಾತಕರ ಕಥೆ.

ರೇಪ್ ವಿಡಿಯೋ ಸಂತ್ರಸ್ತೆಯ ಗಂಡನಿಗೆ ಗಿಫ್ಟ್

ಆ ಕಾಮಾಂಧರು ಬಾಲಕಿಯೊರ್ವಳ ಮೇಲೆ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲ ತಮ್ಮ ಕೃತ್ಯವನ್ನು ವಿಡಿಯೋ ಕೂಡ ಮಾಡಿಕೊಂಡಿದ್ದರು. ದುರದೃಷ್ಟವಶಾತ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದ ಪ್ರಕರಣ ಹಿರಿಯರ ಒತ್ತಾಯಕ್ಕೆ ಸಂಧಾನದಲ್ಲಿ ಅಂತ್ಯಕಂಡಿತು. ಆ ಬಾಲಕಿಯನ್ನು ನಾಲ್ಕು ವರ್ಷದ ಬಳಿಕ ಹೈದ್ರಾಬಾದ್ ನ ಯುವಕನೊರ್ವನಿಗೆ ಮದುವೆ ಮಾಡಿಕೊಡಲಾಯಿತು. ಆದರೇ ಅತ್ಯಾಚಾರ ಎಸಗಿದ ಪಾಪಿಗಳು ಅಲ್ಲಿಯೂ ಆಕೆಗೆ ಕಿರುಕುಳ ನೀಡುವುದನ್ನು ಬಿಟ್ಟಿಲ್ಲ. ಆಕೆಯ ಪತಿಗೆ 4 ವರ್ಷದ ಹಿಂದಿನ ವಿಡಿಯೋ ಕಳಿಸಿರುವ ಕಿರಾತಕರಿಂದ ಆಕೆ ಪತಿ ಮನೆಯಿಂದ ಹೊರಹಾಕಲ್ಪಟ್ಟಿದ್ದು, ಈಗ ಅಕ್ಷರಷಃ ಬೀದಿ ಪಾಲಾಗಿದ್ದಾಳೆ.


ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಆರೀಫ್​ ಎಂಬಾತ ತನ್ನ ಸ್ನೇಹಿತನ ಜೊತೆ ಸೇರಿ ಅದೇ ಗ್ರಾಮದ ಬಾಲಕಿಯೊರ್ವಳಿಗೆ ಮತ್ತು ಬರುವ ಔಷಧಿ ನೀಡಿ ತೋಪಿನಲ್ಲಿ ಅತ್ಯಾಚಾರ ಎಸಗಿದ್ದ. ಆತ ಮಾತ್ರವಲ್ಲದೇ ಆತನ ಸ್ನೇಹಿತನು ಆ ಬಾಲಕಿಯನ್ನು ಹುರಿದು ಮುಕ್ಕಿದ್ದರು. ಇಷ್ಟೇ ಅಲ್ಲದೇ ಕಾಮಪಿಶಾಚಿಗಳಂತೆ ಅತ್ಯಾಚಾರ ಎಸಗಿದ ರಾಕ್ಷಸರು ಇದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದರು.
ಆದರೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿರಲಿಲ್ಲ. ಸಮಾಜದ ಹಿರಿಯರು ಬಾಲಕಿ ಹಾಗೂ ಆಕೆಯ ಹೆತ್ತವರನ್ನು ಕರೆದು ಸಂಧಾನ ಮಾಡಿ ದೂರು ನೀಡದಂತೆ ಬೆದರಿಸಿದ್ದರು. ಹೀಗಾಗಿ ಪ್ರಕರಣವೂ ದಾಖಲಾಗಿರಲಿಲ್ಲ ಬಳಿಕ ಆ ಬಾಲಕಿಯನ್ನು ನಾಲ್ಕು ವರ್ಷಗಳ ಬಳಿಕ ಹೈದ್ರಾಬಾದ್​ನ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು.
ಆದರೆ ಆ ಯುವತಿ ಮದುವೆಯಾಗಿ ಹೈದ್ರಾಬಾದ್​ಗೆ ತೆರಳಿದರೂ ಈ ರಾಕ್ಷಸರು ಆಕೆಗೆ ಕಿರುಕುಳ ನೀಡುವುದನ್ನು ನಿಲ್ಲಿಸಿಲ್ಲ. ಅಷ್ಟೇ ಅಲ್ಲ ಆಕೆಯ ಗಂಡನಿಗೂ ಈ ವಿಡಿಯೋವನ್ನು ವಾಟ್ಸಪ್​​ಗೆ ಕಳುಹಿಸಿ ಹಿಂಸಿಸಿದ್ದಾರೆ. ಹೀಗಾಗಿ ಈ ಯುವಕರ ಅಟ್ಟಹಾಸಕ್ಕೆ ಮದುವೆ,ಸಂಸಾರ ಗಂಡನಿಂದಲೂ ದೂರವಾಗಿರುವ ಯುವತಿ ಇದೀಗ ತನ್ನ ಮೇಲೆ ನಡೆದಿರುವ ಎಲ್ಲ ದೌರ್ಜನ್ಯಗಳಿಗೆ ನ್ಯಾಯ ಕೋರಿ ಶ್ರೀನಿವಾಸಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪೊಲೀಸರು ಆರೋಪಿ ಆರೀಫ್​​ನನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ನಾಪತ್ತೆಯಾಗಿದ್ದಾನೆ. ಒಟ್ಟಿನಲ್ಲಿ ಈ ಅಸಹ್ಯ ಕೃತ್ಯದಿಂದ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದ್ದು, ನಿಜಕ್ಕೂ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಅಲ್ಲದೇ ಹೆಣ್ಣುಮಗಳ ಜೀವನದಲ್ಲಿ ಇಷ್ಟು ಕೀಳುಮಟ್ಟದ ದೌರ್ಜನ್ಯ ನಡೆಸಿದ ಯುವಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

 

Watch here : https://youtu.be/Eg7z9RghQDk