ಪ್ಲೆಕ್ಸ್​ ತೆರವು ವಿಚಾರ ಮತ್ತೊಮ್ಮೆ ಪೊಲೀಸರಿಗೆ ಚಾಟಿ ಬೀಸಿದ ಹೈಕೋರ್ಟ್

 

ad

ನಗರದ ಸೌಂದರ್ಯಕ್ಕೆ ಮಾರಕವಾಗಿರುವ ಪ್ಲೆಜ್ಸ್ ತೆರವಿನ ವಿಚಾರಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಬಿಬಿಎಂಪಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈ ಕೋರ್ಟ್ ವಿಭಾಗೀಯ ಪೀಠ ಇಂದು ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರು ಇಬ್ಬರಿಗೂ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅನಧಿಕೃತ ಫ್ಲೇಕ್ಸ್ ತೆರವು ವಿಚಾರವಾಗಿ ನಿನ್ನೆ ರಾಮಮೂರ್ತಿನಗರದಲ್ಲಿ ನಡೆದ ಹಲ್ಲೆ ವಿಚಾರವಾಗಿ ಇಂದು ಹೈ ಕೋರ್ಟ್ ವಿಭಾಗೀಯ ಪೀಠ ನಗರ ಪೊಲೀಸ್ ಆಯುಕ್ತರನ್ನ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಬಿಬಿಎಂಪಿ ಅಧಿಕಾರಿಗಳು ರಸ್ತೆಗೆ ಇಳಿದು ನೋಡಲಿ ಪರಿಸ್ಥಿತಿ ಏನಾಗಿದೆ ಎಂದು ಗೋತ್ತಾಗುತ್ತೆ ಎಂದು ಬಿಬಿಎಂಪಿ ವಿರುದ್ದವು ಪೀಠ ಗುಡುಗಿತು. ನ್ಯಾಯಾಲಯಕ್ಕೆ ಖುದ್ದು ಹಾಜರಾದ ನಗರ ಪೊಲೀಸ್ ಆಯುಕ್ತರು ನಿನ್ನೆ ನಡೆದ ಪ್ರಕರಣದಲ್ಲಿ ೪ ಜನರನ್ನ ಬಂಧಿಸಿದದ್ದೇವೆ ಇಬ್ಬರನ್ನ ಹುಡುಕುತ್ತಿದ್ದೆವೆ ಎಂದದ್ದಕ್ಕೆ ಮತ್ತಷ್ಟು ಗರಂ ಆದ ಪೀಠ ಬೆಂಗಳೂರು ಕಮೀಷನರ್ ಈ ರೀತಿ ಹೇಳಬಾರದು ನೀವ್ ಬಂಧಿಸಲೇಬೇಕು ಇಬ್ಬರು ಇನ್ನೂ ಸಿಕ್ಕಕಲ್ಲ ಎಂದರೆ ಏನರ್ಥ ಎಂದರು.

ನಾಳೆಯೇ ಚಾರ್ಜ್ ಶೀಟ್ ಸಲ್ಲಿಸಿ..

ಇನ್ನು ರಾಮೂರ್ತಿನಗರ ಪ್ರಕರಣದಲ್ಲಿ ಕೋರ್ಟ್ ಅದೇಶ ಹಾಗೂ ಕಾನೂನನ್ನ ಮೀರಿ ಆರೋಪಿಗಳು ವರ್ತಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಹೀಗೆ ತೊಡಕಾದರೆ ಹೇಗೆ ಎಂದು ಪ್ರಶ್ನಿಸಿದ ವಿಭಾಗೀಯ ಪೀಠ ಪ್ರಕರಣ ಸಂಬಂಧ ಇವತ್ತೆ ತನಿಖೆ ಪೂರ್ತಿಯಾಗಬೇಕು. ನಾಳೆಯೇ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದಿತು. ಅಲ್ಲದೆ ಇದಕ್ಕೆ ಸಂಬಂಧಿಸದಂತೆ ಏನು ಕ್ರಮ ತೆಗೆದುಕೊಳ್ತಿರಾ ಏನು ಯೋಜನೆ ರೂಪಿಸಿದ್ದೀರಾ ಎಂದು ಅಫಿಡಿವಿಟ್ ಸಲ್ಲಿಸಿ ಎಂದು ಸೂಚಿಸಿ ಇದೇ ತಿಂಗಳು ೮ ಕ್ಕೆ ವಿಚಾರಣೆ ಮುಂದೂಡಿತು

 

ಕಾರ್ಯಪ್ರವೃತ್ತವಾದ ಬಿಬಿಎಂಪಿ ಹಾಗೂ ಪೊಲೀಸ್ರು

ಹೈ ಕೋರ್ಟ್ ತೀವ್ರ ತರಾಟೆ ಹಿನ್ನಲೆ ಬಿಬಿಎಂಪಿ ಹಾಗೂ ಪೊಲೀಸ್ರು ಶೀಘ್ರ ಕಾರ್ಯಪ್ರವೃತ್ತರಾಗಿದ್ದಾರೆ. ನಗರದಲ್ಲಿ ಇವತ್ತು ಹಲವು ಕಡೆ ದಾಳಿ ಮಾಡಿರುವ ಬಿಬಿಎಂಪಿ ಅನಧಿಕೃತ ಫ್ಲೆಕ್ಸ್ ಗಳ ತೆರವು ಕಾರ್ಯಾಚರಣೆ ಕೈಗೊಂಡ್ರೆ ಇತ್ತ ನಗರ ಪೊಲೀಸ್ ಆಯುಕ್ತರು ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇನ್ಸಪೆಕ್ಟರ್ ಗಳ ತುರ್ತು ಸಭೆ ಕರೆದು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ರು