ತಂದೆ ತಾಯಿಗೆ ಮದುವೆ ಮಾಡಿಸಿದ ಬಿಗ್ ಬಾಸ್ ಖ್ಯಾತಿಯ ಸಮೀರಾಚಾರ್ಯ.. ಮತ್ಯಾಕೆ ಮದುವೆ ಅಂತೀರಾ? ನೀವೇ ಓದಿ

ತಂದೆ ತಾಯಿ ತಮ್ಮ ಮಕ್ಕಳ ಮದುವೆ ಮಾಡೋದು ಕಾಮನ್ ಆದ್ರೆ ಮಗನೇ ಮುಂದೆ ನಿಂತು ಸಂಪ್ರದಾಯ ಬದ್ಧವಾಗಿ ಹೆತ್ತವರ ಮದುವೆ ಮಾಡಿದ್ದಾರೆ…    

ಮನೆಯಲ್ಲಿ ಮದುವೆಯ ಸಂಭ್ರಮ.. ಬಂಧು ಬಳಗ ಸಂಭ್ರಮದಿಂದ ಮದುವೆ ಕಾರ್ಯದಲ್ಲಿ ಮಗ್ನ… ಮದುವೆಗಾಗಿ ಹೋಮ್ ಹವನ… ಅಂದಹಾಗೇ ಈ ಮದುವೆ ಬೇರೆಯಾರದ್ದು ಅಲ್ಲಾ ಬಿಗ್ ಬಾಸ್ ಖ್ಯಾತಿಯ ಸಮೀರಾಚಾರ್ಯ ಅವರ ತಂದೆ ತಾಯಿ ಮದುವೆ ಮಹೋತ್ಸವ…

ಆಶ್ಚರ್ಯವಾದ್ರು ಸತ್ಯ ಸಮೀರಾಚಾರ್ಯ ತಂದೆ ರಾಘವೇಂದ್ರ ಆಚಾರ್ಯ ಹಾಗೂ ತಾಯಿ ದಿವ್ಯಾ ಆಚಾರ್ಯ ಹುಬ್ಬಳ್ಳಿಯ ಶನಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.. ಅಂದಹಾಗೇ ತಾಯಿ ದಿವ್ಯಾ ಆಚಾರ್ಯ 60 ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡಿದ್ದು, ಅವರ 60 ನೇ ಸಂವತ್ಸರದೊಂದು ಶಾಸ್ತ್ರ ಬದ್ಧವಾಗಿ ಮದುವೆ ಮಾಡಲಾಯಿತು.

ಅಂದಹಾಗೇ ಸಮೀರಾಚಾರ್ಯ ಅವರ ತಂದೆ ರಾಘವೇಂದ್ರ ಆಚಾರ್ಯ 60 ನೇ ಸಂವತ್ಸರಕ್ಕೆ ಕಾಲಿಟ್ಟಾಗ ಮದುವೆ ಮಾಡಲಾಗಿತ್ತು. ಈವಾಗ ತಾಯಿ ದಿವ್ಯಾ ಆಚಾರ್ಯ 60 ನೇ ಸವಂತ್ಸರಕ್ಕೆ ಕಾಲಿಟ್ಟಿದ್ದು ಹಾಗಾಗಿ ಮತ್ತೇ ಈವಾಗ ಇಬ್ಬರ ಮದುವೆ ಮಾಡಲಾಯಿತು. ರಾಘವೇಂದ್ರ ಆಚಾರ್ಯ ಹಾಗೂ ದಿವ್ಯಾ ಆಚಾರ್ಯ 45 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಜೀವನದಲ್ಲಿ ಕಷ್ಟ ಸುಖವನ್ನು ಸಮನಾಗಿ ಸ್ವೀಕಾರ ಮಾಡಿದ್ದಾರೆ.

16 ಸಂಸ್ಕಾರಗಳ ಪೈಕಿ ಮಕ್ಕಳು ಹೆತ್ತವರ ಮದುವೆ ಮಾಡೋದು‌ ಬಹಳ‌ ಪ್ರಾಮುಖ್ಯತೆ ಪಡೆಯುತ್ತಂತೆ. ಹಾಗಾಗಿ ಸಮೀರಾಚಾರ್ಯ ತಂದೆ ತಾಯಿ ಮದುವೆ ಮಾಡಿದ್ದಾರೆ. ಹಾಗೇ 60 ಸಂವತ್ಸರ ಪೂರೈಸಿದ ಬಳಿಕ ಹಿರಿತನದಲ್ಲಿ ಬದಲಾವಣೆಯಾಗಿ ಅವರು ಮಕ್ಕಳಂತೆ ಹಠ ಮಾಡ್ತಾರಂತೆ ಹಾಗಾಗಿ ಅವರನ್ನು ಮುಪ್ಪಿನ ವಯಸ್ಸಿನಲ್ಲಿ ಅವರನ್ನು ಚನ್ನಾಗಿ ‌ನೋಡಕೊಳ್ಳಬೇಕು. ಇತ್ತೀಚೆಗೆ ವೃದ್ಧಾಶ್ರಮಗಳಿಗೆ ಹೆತ್ತವರನ್ನು ಬಿಡುವದು ಕಾಮನ್ ಆಗ್ತಾ ಇದೆ.. ಹೀಗಾಗಿ ಮಕ್ಕಳು ಹೆತ್ತವರನ್ನು ಚನ್ನಾಗಿ ಆರೈಕೆ ಮಾಡಬೇಕು ಎಂದು ಸಮಾಜಕ್ಕೆ ಒಂದು ಮೆಸೇಜ್ ಪಾಸ್ ಮಾಡಿದ್ದಾರೆ..

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..