ಸೋದೆ ಮಠದ ನೋಟೀಸ್ ಗೆ ಶಿರೂರು ಶ್ರೀಗಳ ಪ್ರತಿಕ್ರಿಯೆ ಏನು?

ಶಿರೂರು ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅಷ್ಟಮಠದಿಂದ ನೀಡಿದ ನೋಟಿಸ್ ಶಿರೂರು ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಖಾಸಗಿ ಚಾನಲ್ ನನ್ನ ವಿರುದ್ಧ ವಿಚಾರ ಪ್ರಸಾರವಾಗಿದೆ. ಮುಖ್ಯವಾಗಿ ಆ ವಿಚಾರ ಕೋರ್ಟ್ ನಲ್ಲಿದೆ. ಅಲ್ಲಿ ಬಂದಿರುವುದು ನನ್ನ ಭಾವಚಿತ್ರವೂ ಅಲ್ಲ. ನನ್ನ ಮಾತು ಕೂಡ ಅಲ್ಲ ಎಂದು ಶಿರೂರು ಲಕ್ಮ್ಷೀವರ ಸ್ವಾಮೀಜಿ ಹೇಳಿದ್ದಾರೆ.
ಕೊರ್ಟ್ ನಲ್ಲಿ ಇರುವ ವಿಚಾರ ಚರ್ಚೆ ಮಾಡುವುದು ಕೊರ್ಟ್ ಗೆ ನಿಂದನೆ ಮಾಡಿದ ಹಾಗಾಗುತ್ತದೆ. ಮಠದಿಂದ ಪತ್ರ ಬಂದಿತ್ತು . ಆದರೆ ಅದನ್ನು ನಾನು ಸ್ವೀಕಾರ ಮಾಡಿಲ್ಲ ಪತ್ರದಲ್ಲಿ ಏನಿದೆ ಅನ್ನುವುದು ಮಾಧ್ಯಮಗಳನ್ನು ನೋಡಿದಾಗ ತಿಳಿಯಿತು.

ದ್ವಂದ್ವ ಮಠದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅವರವರ ಮಠ ಅವರವರಿಗೆ. ದ್ವಂದ್ವ ಮಠಕ್ಕೆ ಆಧಾರ ಕೂಡ ಇಲ್ಲ ಎಂದಿದ್ದಾರೆ. ಕೃಷ್ಟ ಮಠದ ಹಾಗೂ ಅಷ್ಟಮಠದ ಭಕ್ತರಿಗೆ ಮನಸ್ಸಿಗೆ ನೋವಾಗಿದೆ ಇದರ ಹಿಂದೆ ನನ್ನ ಹಿಂದುತ್ವವನ್ನು ಬಡಿಯುವ ಒಂದೇ ಉದ್ದೇಶವಿದೆ.
ಶಿರೂರು ಮಠಕ್ಕೆ ತುಂಬಾ ಅಭಿಮಾನಿಗಳಿದ್ದಾರೆ.  ಇದರಿಂದ ಅವರಿಗೆ ಕೂಡ ನೋವಾಗಿದೆ. ವಿಡಿಯೊದಲ್ಲಿ‌ ಇರುವುದು ನಾನು ಅಲ್ಲ ಎಂದು ಹೇಳಿಯಾಗಿದೆ. ಇದರಿಂದ ಕೃಷ್ಣಮಠ ಭಕ್ತ ರಿಗೆ ನೋವಾಗಿದೆ. ಶ್ರೀಕೃಷ್ಣ ಮುಖ್ಯಪ್ರಾಣ ಇದ್ದಾನೆ‌.ಎಲ್ಲವನ್ನೂ ಅವನೇ ನೋಡುತ್ತಾನೆ ಎಂದಿದ್ದಾರೆ.