ಗದ್ದೆಯಲ್ಲಿ ಅರಳಿದ ಸ್ವಚ್ಛ ಭಾರತ ಅಭಿಯಾನ

ಕೇಂದ್ರ ಸರ್ಕಾರದ ಜಾಹೀರಾತು ಮತ್ತು ನೋಟುಗಳ ಮೇಲೆ ಕಾಣುವಂತ ಸ್ವಚ್ಛ ಭಾರತ್ ಲೋಗೋ ಇದೀಗ ದಾವಣಗೆರೆ ಜಿಲ್ಲೆಯ ರೈತನ ಗದ್ದೆಯಲ್ಲಿ ಅರಳಿದೆ. ಹೌದು, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಆಂಜನೇಯ ಎಂಬುವ ರೈತ ತನ್ನ ಹೊಲದಲ್ಲಿ ಈ ಲೋಗೋ ಅನಾವರಣಗೊಳಿಸಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಕನ್ನಡಕದಲ್ಲಿ ಸ್ವಚ್ಛ ಭಾರತ್ ಅಂತಾ ಹಿಂದಿಯಲ್ಲಿ ಬರೆದಂತೆ ಭತ್ತದ ನಾಟಿ ಮಾಡಿದ್ದಾರೆ. ವಿಶೇಷ ಅಂದ್ರೆ ಕಳೆದ ಹತ್ತು ವರ್ಷಗಳಿಂದ ದೇಸಿ ಭತ್ತದ ಸಂಶೋಧನೆ ಮಾಡುತ್ತಿರುವ ರೈತ ಅದೇ ದೇಸೀ ತಳಿಯಲ್ಲೇ ಸ್ವಚ್ಛ ಭಾರತ ಲಾಂಛನ ನಾಟಿ ಮಾಡುವ ಮೂಲಕ ರೈತರಲ್ಲೂ ಸ್ವಚ್ಛತೆ ಅರಿವು ಮೂಡಿಸಿದ್ದಾರೆ.