ಬಸ್ ನಲ್ಲಿ ಬೆಕ್ಕಿಗೂ ಟಿಕೆಟ್ಟಾ? ಮಜವಾಗಿದೆ ಈಸುದ್ದಿ.. ನೀವೇ ಓದಿ.

ಬಸ್ ನಲ್ಲಿ ಪ್ರಯಾಣಿಸುವಾಗ ಮನುಷ್ಯರಿಗೆ, ಇತರೆ ವಸ್ತುಗಳಿಗೆ ಬಸ್ ಟಿಕೇಟ್ ಕೊಡುವದನ್ನ ನೋಡಿರ್ತಿರಿ. ಆದ್ರೆ ವಿಜಯಪುರ ನಗರಸಾರಿಗೆ ನಿರ್ವಾಹಕಿಯೊಬ್ಬರು ಬೆಕ್ಕಿಗೆ ಟಿಕೆಟ್ ಕೊಟ್ಟಿದ್ದಾರೆ. ಹೌದು, ನಗರದ ಮೌಲಾಲಿ ಎಂಬಾತ ರೈಲು ನಿಲ್ದಾಣದಿಂದ ಚೀಲದಲ್ಲಿ ಬೆಕ್ಕು ತೆಗೆದುಕೊಂಡು ನಗರಸಾರಿಗೆ ಬಸ್ ಹತ್ತಿದ್ದಾನೆ.

ಟಿಕೆಟ್ ಪಡೆಯೋವಾಗ ಬೆಕ್ಕು ಮ್ಯಾಂವ್ ಮ್ಯಾಂವ್ ಅಂತ ಸದ್ದು ಮಾಡಿದೆ. ಆಗ ನಿರ್ವಾಹಕಿ ಬೆಕ್ಕಿಗೆ ಟಿಕೆಟ್ ತೆಗೆದುಕೊಳ್ಳಬೇಕೆಂದಿದ್ದಾರೆ. ಆಗ ಬೆಕ್ಕಿನ ಮಾಲೀಕ ಸೇರಿದಂತೆ ಬಸ್ ನಲ್ಲಿದ್ದವರು ಅಚ್ಚರಿಯಾಗಿದೆ. ಆಗ ನಿರ್ವಾಹಕಿ ಬೆಕ್ಕಿಗೂ ಸಹಿತ ಪೂರ್ಣ ಟಿಕೆಟ್ ಕೊಟ್ಟಿದ್ದಾರೆ. ಇನ್ನು ನಗರದ ಗಾಂಧಿ ಚೌಕ್ ದವರಿಗೆ ಬೆಕ್ಕಿಗೂ ರೂ, 6 ಟಿಕೆಟ್ ವಿಧಿಸಿದ್ದಾರೆ. ಬಸ್ ನಲ್ಲಿ ಕೆಲಕಾಲ ಬೆಕ್ಕಿಗೆ ಬಸ್ ಚಾರ್ಜ್ ಅಂತ ಪ್ರಯಾಣಿಕರು ಮಾತನಾಡಿಕೊಂಡಿದ್ದಾರೆ. ಕೆಲವರು ಬೆಕ್ಕಿಗೆ ಯಾಕೆ ಬಸ್ ಚಾರ್ಜ್ ಕೊಡಬೇಕು ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ. ಮನುಷ್ಯರಿಗೆ, ಇತರೆ ವಸ್ತು ಗಳಿಗೆ ಟಿಕೆಟ್ ತೆಗೆದುಕೊಳ್ಳುವದು ಸಾಮಾನ್ಯ. ಆದ್ರೆ ಸಾಕುಪ್ರಾಣಿ ಬೆಕ್ಕಿಗೂ ಬಸ್ ಚಾರ್ಜ್ ಕೊಡಬೇಕಲ್ಲಾ ಎಂದು ಪ್ರಯಾಣಿಕರು ಚರ್ಚೆ ಮಾಡಿದ್ದಾರೆ…

ವರದಿ: ರುದ್ರೇಶ ಮುರನಾಳ, ಬಿಟಿವಿ ನ್ಯೂಸ್ ವಿಜಯಪುರ