ಹೆಬ್ಬಾಳ ರಸ್ತೆಯಲ್ಲಿ ಸರಣಿ ಅಪಘಾತ: ಏರ್ ಶೋಗೆ ತಟ್ಟಿದ ಟ್ರಾಫಿಕ್ ಬಿಸಿ

ಹೆಬ್ಬಾಳ ರಸ್ತೆಯಲ್ಲಿ ಸರಣಿ ಅಪಘಾತ: ಏರ್ ಶೋಗೆ ತಟ್ಟಿದ ಟ್ರಾಫಿಕ್ ಬಿಸಿ

ಟ್ರಾಫಿಕ್ ಜಾಮ್​ನಿಂದ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಕಾರುಗಳ ಡಿಕ್ಕಿ ಬೈಕ್​ಗಳು ಮುಖಾಮುಖಿಯಾಗಿದ್ದು ಸರಿಣಿ ಅಪಘಾತ ಸಂಭವಿಸಿದೆ. ಯಾವುದೇ ಪ್ರಣಹಾನಿ ಉಂಟಾಗದೇ ಇದ್ದರೂ ರಸ್ತೆಯಲ್ಲಿ ದಟ್ಟ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

ಅಪಘಾತದಿಂದ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಗೂ ಇದರ ಬಿಸಿ ತಟ್ಟಿದೆ. ಸ್ಥಳಕ್ಕೆ ಹೆಬ್ಬಾಳದ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು  ಟ್ರಾಫಿಕ್ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದಾರೆ.