ಈ ಊರಿನ ಹೆಚ್ಚಿನ ಎಲ್ಲಾ ಮನೆಗೂ ಪರವಾನಿಗೆ ಹೊಂದಿದ ಗನ್!! ಇಲ್ಲಿ ಮನೆ ಮನೆಯವರೂ ಹೆಗಲಿಗೆ ಬಂದೂಕು ಏರಿಸ್ತಾರೆ!!

ಒಂದು ಊರಲ್ಲಿ ಅಬ್ಬಬ್ಬ ಅಂದರೆ ಮೂರ್ನಾಲ್ಕು ಅದಕ್ಕಿಂತ ಹೆಚ್ಚೆಂದ್ರೆ ಹತ್ತು ಹದಿನೈದು ಗನ್​ಗಳಿರುತ್ತವೆ.. ಇದೇನು ಈಗ್ಯಾಕೆ ಗನ್ ಸುದ್ದಿ ಅಂದ್ಕೊಂಡ್ರಾ?

ಹೌದು. ಚುನಾವಣೆ ಬಂತೆಂದರೆ ಗನ್ ಗಳನ್ನು ಪೋಲೀಸ್ ಠಾಣೆಯಲ್ಲಿ ಭದ್ರಪಡಿಸಿ ಇಡೋದು ಪರವಾನಿಗೆ ಇರುವ ಗನ್ ಮಾಲಿಕರ ಕರ್ತವ್ಯ. ಒಂದು ಊರಲ್ಲಿ ಎಷ್ಟು ಗನ್ ಗಳಿರಬಹುದು? 10-15 ಇದೆ ಅಂತ ನೀವು ಊಹಿಸಿದರೆ ನಿಮ್ಮ ಊಹೆ ಸರಿಯಾದದ್ದು.  ಆದರೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಆಲ್ಲೂರ ಗ್ರಾಮದಲ್ಲಿ 150 ಕ್ಕೂ ಅಧಿಕ ಮನೆಗಳಿವೆ.. ಅಲ್ಲಿ ಮನೆಗೊಂದು ಗನ್​ಗಳಿವೆ.. ಅಂದರೆ ಸುಮಾರು 130 ಕ್ಕೂ ಅಧಿಕ ಗನ್​ಗಳನ್ನ ಹೊಂದಿದೆ ಜಿಲ್ಲೆಯ ಏಕೈಕ ಗ್ರಾಮ..  

ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಆಯಾ ಠಾಣಾ ವ್ಯಾಪ್ತಿಯಲ್ಲಿನ ಎಲ್ಲಾ ಶಸ್ತ್ರಾಸ್ತ್ರಗಳನ್ನ ಡಿಪಾಸಿಟ್ ಮಾಡಬೇಕು.. ಹೀಗಾಗಿ ಆಲ್ಲೂರ ಗ್ರಾಮದ ಗನ್ ಹೊಂದಿದ ಎಲ್ಲಾ ಜನರು ಚಿತ್ತಾಪುರ ಪೊಲೀಸ್ ಠಾಣೆಗೆ ಬಂದು ಸ್ವಯಂಪ್ರೇರಿತವಾಗಿ ನಾಡ ಪಿಸ್ತೂಲ್​ಗಳನ್ನ ಡಿಪಾಸಿಟ್ ಮಾಡಿ ರಸೀದಿ ಪಡೆದು ಹೋಗುತ್ತಿದ್ದಾರೆ.. ಈ ಗನ್ ಹೊಂದಿದ ಎಲ್ಲಾ ವ್ಯಕ್ತಿಗಳು ಲೈಸನ್ಸ್ ಹೊಂದಿದ್ದಾರೆ… ಅಷ್ಟಕ್ಕೂ ಆಲ್ಲೂರ ಗ್ರಾಮ ಗುಡ್ಡಗಾಡು ಹಾಗೂ ಸ್ವಲ್ಪ ಕಾಡು ಪ್ರದೇಶದಿಂದ ಕೂಡಿರುವ ಪ್ರದೇಶ.. ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಸಿಕ್ಕಾಪಟ್ಟೆ ಇದೆ.. ಹೀಗಾಗಿ ಜೀವರಕ್ಷಣೆಗೊಸ್ಕರ ಈ ಗ್ರಾಮದಲ್ಲಿ ಪ್ರತಿಯೊಂದು ಮನೆಗಳಲ್ಲಿ ಗನ್​ ಹೊಂದಿದ್ದಾರೆ.. ಜಮೀನುಗಳಿಗೆ ಅಥವಾ ಬಯಲು ಪ್ರದೇಶಗಳಲ್ಲಿ ಕುರಿಗಳು, ದನಗಳನ್ನ ಮೇಯಿಸಲು ಹೋದಾಗ ಕಾಡು ಪ್ರಾಣಿಗಳು ದಾಳಿ ಮಾಡುವ ಭೀತಿಯಿಂದ ಈ ಗ್ರಾಮಸ್ಥರು ಲೈಸೆನ್ಸ್​ಯುಕ್ತ ಗನ್​​ಗಳನ್ನ ಹೊಂದಿದ್ದು ವಿಶೇಷವಾಗಿದೆ. ಆದರೆ ಇದೀಗ ಚುನಾವಣೆ ನೀತಿ ನಿಯಮದ ಪ್ರಕಾರ ಎಮ್ ಎಲ್ ಎ ಎಲೆಕ್ಷನ್ ಡಿಕ್ಲೇರ್ ಆಗಿದ್ದರಿಂದ ಯಾರೊಬ್ಬರು ಶಸ್ತ್ರಾಸ್ತ್ರಗಳನ್ನ ಹೊಂದಬಾರದೆಂದು, ಚುನಾವಣೆ ಅಧಿಕಾರಿಗಳ ಸೂಚನೆ ಮೇರೆಗೆ ನಾಡ ಪಿಸ್ತೂಲ್​ಗಳನ್ನ ತಂದು ಡೆಪಾಸಿಟ್ ಮಾಡ್ತಿದ್ದು, ಚುನಾವಣೆ ಮುಗಿದ ನಂತರ ಮತ್ತೆ ಗನ್​ಗಳನ್ನ ಮರಳಿ ಪಡೆಯುತ್ತಾರೆ.. ಸಧ್ಯ ಕಲಬುರಗಿ ಜಿಲ್ಲೆಯಲ್ಲಿ 40 ಪೊಲೀಸ್ ಠಾಣೆಗಳಿದ್ದು, ಸುಮಾರು 1500 ನಾಡ ಪಿಸ್ತೂಲ್​ಗಳನ್ನ ಹೊಂದಿದ್ದಾರೆ. ಆದರೆ ಒಂದೇ ಗ್ರಾಮದಲ್ಲಿ ಇಷ್ಟೊಂದು ಗನ್​ಗಳಿರೋದು ವಿಶೇಷವಾಗಿದೆ..

ವರದಿ: ಅನಿಲ್ ಸ್ವಾಮಿ, ಬಿ ಟಿವಿ ನ್ಯೂಸ್, ಕಲಬುರಗಿ..