ತಿಮಿಂಗಲವನ್ನೇ ರಕ್ಷಿಸಿದ ಯುವಕರು!!ಹೇಗಿತ್ತು ಗೊತ್ತಾ ಆ ತಿಮಿಂಗಲ!! ಆ ಕಾರ್ಯಾಚರಣೆ ನೋಡಿದ್ರೆ ದಂಗಾಗುವುದಂತೂ ಖಂಡಿತ!!

ಬೋಟ್ ಒಂದರ ತಳ ಭಾಗದಲ್ಲಿ ಸಿಲುಕಿಕೊಂಡು ಸಮುದ್ರ ದಡಕ್ಕೆ ಸೇರಿದ್ದ ಚಿಕ್ಕ ಗಾತ್ರದ ತಿಮಿಂಗಿಲವನ್ನು ಮೂವರು ಯುವಕರು ಸೇರಿ ರಕ್ಷಿಸಿದ ಘಟನೆ ಉಳ್ಳಾಲದ ಸೋಮೇಶ್ವರ ಬೀಚ್ ಬಳಿ ನಡೆದಿದೆ. ಸುಮಾರು 9 ಅಡಿ ಉದ್ದವಿದ್ದ ಈ ಮೀನು ದಡಕ್ಕೆ‌‌ ಸೇರಿ ಅಪಾಯದಲ್ಲಿ ಸಿಲುಕಿತ್ತು ಈ ವೇಳೆ ಬೀಚ್ ಗೆ ವಿರಮಿಸಲೆಂದು ಬಂದಿದ್ದ ಸ್ಥಳೀಯ ಕುಟುಂಬವೊಂದು ಮೀನು ಅಪಾಯದಲ್ಲಿರುವುದನ್ನು ಕಂಡು ಕೂಡಲೇ ರಕ್ಷಿಸುವಂತ ಕಾರ್ಯ ಮಾಡಿದ್ದಾರೆ.

ad

ಫರ್ಜಾನ ಸಿದ್ದಕಟ್ಟೆ ಎಂಬವರು ಸೇರಿದಂತೆ ಇಬ್ಬರು ಯುವಕರು ಮೀನನ್ನ ಮತ್ತೆ ಸಮುದ್ರಕ್ಕೆ ಸೇರಿಸಿ ಅಪಾಯದಲ್ಲಿದ್ದ ತಿಮಿಂಗಳವನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಇದೀಗ ಈ ಇಬ್ಬರು ಯುವಕರು ಮೀ‌ನನ್ನು ರಕ್ಷಿಸುವಂತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಇವರ ಈ ಮಾನವೀಯತೆ ಗುಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಇನ್ನು ಈ ಮೀನು ಬೋಟ್ ತಳ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರಣ ಸ್ವಲ್ಪ ಪ್ರಮಾಣದ ಗಾಯವಾಗಿತ್ತು ಅನ್ನೋದನ್ನ ಮೀನನ್ನು ರಕ್ಷಿಸಿದ ಯುವಕರು ತಿಳಿಸಿದ್ದಾರೆ.

 

ವರದಿ: ಶರತ್ ಬಿಟಿವಿ ಮಂಗಳೂರು