ಇದು 2018 ರ ಚುನಾವಣೆಯ ಮೊದಲ ಬೆಟ್ಟಿಂಗ್ ! ವಿಡಿಯೋ ವೈರಲ್ !!

2018 ರ ಚುನಾವಣಾ ಕಣ ರಂಗೇರುತ್ತಿದೆ. ಈಗಾಗಲೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷಗಳು ಯಾರು ಮೇಲುಗೈ ಸಾಧಿಸಬಹುದು ಎಂಬ ಚರ್ಚೆಯೂ ಜೋರಾಗಿದೆ. ಹೀಗಿರುವಾಗಲೇ ರಾಮನಗರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಬೆಟ್ಟಿಂಗ್ ರೂಪ ಪಡೆದುಕೊಂಡಿದ್ದು, ಬೆಟ್ಟಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.

ರಾಮನಗರ ಜಿಲ್ಲೆಯ ಮಾಗಡಿಯ ಡಾಬಾವೊಂದರಲ್ಲಿ ಬಂಡಾಯ ಶಾಸಕ ಶ್ರೀನಿವಾಸ್​ ಬೆಟ್ಟಿಂಗ್​ನಲ್ಲಿ ತೊಡಗಿರುವ ದೃಶ್ಯ ಈ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಸಲದ ಚುನಾವಣೆಯಲ್ಲಿ ಎಚ್​.ಸಿ.ಬಾಲಕೃಷ್ಣ ಸೇರಿದಂತೆ ನಾಲ್ವರು ಬಂಡಾಯ ಶಾಸಕರು ಗೆಲ್ಲುತ್ತಾರೆ ಎಂದು ಶ್ರೀನಿವಾಸ ವಾದಿಸಿದ್ದರೇ ಇನ್ನೊರ್ವ ಜೆಡಿಎಸ್​​ ಬೆಂಬಲಿಗ ಬೋರೇಗೌಡ್ ಎಂಬಾತ ಬಂಡಾಯ ಶಾಸಕರು ಯಾವುದೇ ಕಾರಣಕ್ಕೂ ಗೆಲುವುದಿಲ್ಲ ಎಂಬು ವಾದಿಸಿದ್ದಾನೆ.

ಕೊನೆಯಲ್ಲಿ ಇಬ್ಬರು ತಲಾ 40 ಸಾವಿರ ರೂಪಾಯಿಗೆ ಬೆಟ್ಟಿಂಗ್ ಕಟ್ಟಿದ್ದು, ನೋಟುಗಳನ್ನು ಎಣಿಸುತ್ತಿರುವ ದೃಶ್ಯ ಕೂಡಾ ಮೊಬೈಲ್​ನಲ್ಲಿ ರೆಕಾರ್ಡ್ ಆಗಿದೆ. ರಾಮನಗರದಲ್ಲಿ ಸಧ್ಯಕ್ಕೆ ಜೆಡಿಎಸ್​ ಮತ್ತು ರೆಬೆಲ್​ ಶಾಸಕರ ನಡುವಿನ ಚುನಾವಣೆ ಫಲಿತಾಂಷವೇ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇನ್ನೇನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೆಟ್ಟಿಂಗ್ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.