ಸ್ಪರ್ಧೆ ವೇಳೆಯೆ ದೇಹದಾರ್ಡ್ಯಪಟು ಸಾವು- ಮಂಗಳೂರಿನಲ್ಲಿ ಆತಂಕಕಾರಿ ಘಟನೆ

ಯುವಕರಿಗೆ ಬಾಡಿ ಬಿಲ್ಡಿಂಗ್​ ಅಂದ್ರೆ ಅದೆನೋ ಕ್ರೇಜ್. ಹೀಗಾಗಿ ಮೂರು ಹೊತ್ತು ಜಿಮ್​, ಸಿಕ್ಸ್ ಪ್ಯಾಕ್​ ಅಂತ ಓಡಾಡ್ತಾರೆ. ಆದರೆ ಇಲ್ಲೊಬ್ಬ ಯುವಕ ಬಾಡಿ ಬಿಲ್ಡಿಂಗ್ ಸ್ಪರ್ಧೆ ವೇಳೆಯೆ ಕುಸಿದು ಬಿದ್ದು ಸಾವನ್ನಪ್ಪಿದ ಆತಂಕಕಾತಿ ಘಟನೆ ನಡೆದಿದೆ. ಮಂಗಳೂರಿನ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ನಿವಾಸಿ ವಿನಯರಾಜ್ ಮೃತ ದುರ್ದೈವಿ.

ನಿನ್ನೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್​ನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ರಾತ್ರಿ ನಡೆದ ಸ್ಪರ್ಧೆಯಲ್ಲಿ ವಿನಯ್ ಭಾಗವಹಿಸಿ ದೇಹದಾರ್ಡ್ಯ ಪ್ರದರ್ಶನ ನೀಡಿದ್ದರು. ಪ್ರದರ್ಶನ ನೀಡಿ ವಿಶ್ರಾಂತಿ ಕೊಠಡಿಗೆ ತೆರಳುತ್ತಿದ್ದಂತೆ ವಿನಯ್ ಕುಸಿದು ಬಿದ್ದಿದ್ದು, ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.
ಮಂಗಳೂರಿನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ರಾಜ್ 5 ವರ್ಷಗಳಿಂದ ಬಾಡಿ ಬಿಲ್ಡಿಂಗ್​ ಮಾಡುತ್ತಿದ್ದ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದ. ರಾಜ್ಯದ ಮಟ್ಟದ ಹಿರಿಯರ ಬೆಂಚ್​​ ಮಟ್ಟದ ಪ್ರೆಸ್​ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದರು. ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿದ್ದರು.