ಶವದ ಸಮೇತ ಬಸ್​ ನಿಲ್ದಾಣಕ್ಕೆ ಬಂತು ಬಸ್​​- ಇದು ಚಾಲಕನ ಅಜಾಗರೂಕತೆಗೆ ಸಿಕ್ಕ ಸಾಕ್ಷಿ!

80 Km corpse from Airavat Bus in Bengaluru.
80 Km corpse from Airavat Bus in Bengaluru.

ಆ ಬಸ್​ ನೂರಾರು ಕಿಲೋಮೀಟರ್ ಕ್ರಮಿಸಿ ಬೆಂಗಳೂರಿನ ಶಾಂತಿನಗರ ಬಸ್​ ನಿಲ್ದಾಣ ತಲುಪಿತ್ತು.

ಡ್ಯೂಟಿ ಮುಗಿಸಿದ್ದ ಚಾಲಕ ತನ್ನ ಪಾಡಿಗೆ ತಾನು ಮನೆಗೆ ತೆರಳಿದ್ದ. ಆದರೇ ಡಿಪೋದಲ್ಲಿದ್ದ ಬಸ್​ ಸ್ವಚ್ಛಗೊಳಿಸಲು ಬಂದಿದ್ದ ಕೆಲಸಗಾರರಿಗೆ ಶಾಕ್​ ಒಂದು ಕಾದಿತ್ತು. ಹೌದು ಬಸ್​ ನ ಚಾರ್ಸಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಈ ಶವ ಸುಮಾರು 80 ಕಿಲೋಮೀಟರ್​​ ಬಸ್​ ಜೊತೆಯಲ್ಲೇ ಕ್ರಮಿಸಿ ಬಂದಿದೆ ಎನ್ನಲಾಗಿದೆ.  ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಐರಾವತ ಬಸ್ ನ ಚಾರ್ಸಿಯಲ್ಲಿ ಶವ ಪತ್ತೆಯಾಗಿದ್ದು, ಶವದ ಸಮೇತ ಬಸ್​ ಶಾಂತಿನಗರ ಬಸ್​ ನಿಲ್ದಾಣಕ್ಕೆ ಬಂದು ಬಳಿಕ ಡಿಪೋಕ್ಕೆ ತೆರಳಿತ್ತು. ದಾರಿ ಮಧ್ಯೆ ಎಲ್ಲೋ ಬಸ್​ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ಆ ದೇಹ ಬಸ್​​ನ ಅಡಿಯಲ್ಲಿ ಸಿಲುಕಿತ್ತು.

 

ಆದರೇ ಇದು ಡ್ರೈವರ್​ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಶವದ ಸಮೇತ ಶಾಂತಿನಗರ ಒಂದನೇ ಡಿಪೋಗೆ ಬಂದಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್​ ಚಾಲಕ ಮೊಹಿನುದ್ದೀನ್​​​​ನನ್ನ ವಿಲ್ಸನ್​​ ಗಾರ್ಡನ್​​ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕಣ್ಣೂರಿನಿಂದ ಗುರುವಾರ ಹೊರಟಿದ್ದ ಬಸ್​​ ಮೈಸೂರು, ಮಂಡ್ಯ, ರಾಮನಗರ ಮಾರ್ಗವಾಗಿ ಶುಕ್ರವಾರ ಬೆಳಗಿನ ಜಾವ 2.30ಕ್ಕೆ ಬಂದಿದೆ. ಪ್ರಯಾಣಿಕರನ್ನು ಇಳಿಸಿ ಬೆಳಿಗ್ಗೆ 3 ಗಂಟೆಗೆ ಡಿಪೋಗೆ ಚಾಲಕ ಬಸ್​ನ್ನ ಒಯ್ದಿದ್ದ. ಅಪಘಾತ ಆಗಿರೋದು ಹಾಗೂ ಶವ ಬಸ್​ನ ಚಾರ್ಸಿಯಲ್ಲೇ ಇರೋದು ಚಾಲಕನ ಗಮನದಲ್ಲಿತ್ತು. ಆದರೇ ಆತ ಭಯದಿಂದ ಈ ವಿಚಾರ ಯಾರ ಗಮನಕ್ಕೂ ತರದೇ ಬಸ್​ ನಿಲ್ಲಿಸಿ ಮನೆಗೆ ತೆರಳಿದ್ದ ಎನ್ನಲಾಗಿದೆ. ಒಟ್ಟಿನಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯ ದೇಹವೊಂದು ಬಸ್​ ಚಾರ್ಸಿಯಲ್ಲೇ ಸಿಲುಕಿಕೊಂಡು ನೂರಾರು ಕಿಲೋಮೀಟರ್​​ ಕ್ರಮಿಸಿಕೊಂಡು ಬಂದಿರೋದು ಮಾತ್ರ ದುರಂತವೇ ಸರಿ.

ಪ್ರತ್ಯುತ್ತರ ನೀಡಿ

Please enter your comment!
Please enter your name here