ಮೈಸೂರಿನಲ್ಲಿ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಎರಡನೇ ಕಾಲಿಟ್ಟಿದೆ. ಆದರೇ ಆರಂಭದಿಂದಲೂ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆ ಇಂದು ಕೂಡ ಮುಂದುವರೆದಿದ್ದು, ಸಾಹಿತ್ಯ ಪರಿಷತ್ ಸಂಸ್ಥಾಪಕ ರಾಜವಂಶಕ್ಕೆ ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನಿಸದೇ ಅವಮಾನಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನಲ್ಲಿ 83 ನೇ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತವಾದಾಗಿನಿಂದಲೂ ಒಂದಿಲ್ಲೊಂದು ಸಮಸ್ಯೆಗಳು ಹಾಗೂ ವಿವಾದಗಳು ಸುತ್ತಿಕೊಳ್ಳುತ್ತಲೇ ಇದೆ. ಇದೀಗ ಸಾಹಿತ್ಯ ಸಮ್ಮೇಳನದಲ್ಲಿ ರಾಜಮನೆತನವನ್ನು ಕಡೆಗಣಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ರಾಜಮನೆತನದ ರಾಜಮಾತೆ ಒಡೆಯರ ಪ್ರಮೋದಾ ದೇವಿಯಾಗಲಿ ಅಥವಾ ಯುವರಾಜ ಯದುವೀರೊಡೆಯರ್ ಗಾಗಲಿ ಆಹ್ವಾನ ನೀಡಿಲ್ಲ. ಆಹ್ವಾನ ಪತ್ರಿಕೆಯಲ್ಲೂ ರಾಜಮನೆತನದ ಹೆಸರಿಲ್ಲ.

ಸಮ್ಮೇಳನದಲ್ಲಿ ಕೇವಲ ನಾಲ್ವಡಿ ಕೃಷ್ಣರಾಜಒಡೆಯರ ಹೆಸರಿನ ಮಹಾಮಂಟಪವನ್ನು ನಿರ್ಮಿಸಲಾಗಿದ್ದು ಆದರೇ ಅಲ್ಲಿಯೇ ಇರುವ ರಾಜಮನೆತನವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಜಮನೆತನದ ಆಪ್ತರು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Watch Here: https://youtu.be/UCs0YGSztCI