ಅಭಿಮಾನಿಗಳ ಅಭಿಯಾನ ಕಂಡು ದಂಗಾದ ಚಾಲೆಂಜಿಂಗ್​ ಸ್ಟಾರ್​ ದರ್ಶನ್..!​

ಫೆಬ್ರವರಿ 16ಕ್ಕೆ ಅಭಿಮಾನಿಗಳ ಪ್ರೀತಿಯ ದಾಸನ​ ಬರ್ತ್​ಡೇ. ಜಗ್ಗುದಾದನ ಬರ್ತ್​ಡೇ ಅಂದ್ರೆ ಅಭಿಮಾನಿಗಳ ಹಬ್ಬ ಇದ್ದಂತೆ.

 

ಈ ಸರ್ತಿ ಕೂಡ ದರ್ಶನ್​​ ಬರ್ತ್​ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್​​ ಥಿಲ್​ ಆಗಿದ್ದಾರೆ. ಹಾಗ್​ ನೋಡಿ ತಿಂಗಳ ಹಿಂದೆಯೇ ಡಿ ಫ್ಯಾನ್ಸ್​ ಸಾಮಾಜಿಕ ಜಾಲತಾಣಗಳಲ್ಲಿ ಕೌಂಟ್​ಡೌನ್​ ಶುರು ಮಾಡಿದ್ದರು. ಈ ಬಾರಿ ಅಭಿಮಾನಿಗಳು ದರ್ಶನ್​ ಬರ್ತ್​ಡೇಯನ್ನು ಡಿ ಉತ್ಸವ ಕರುನಾಡ ಹಬ್ಬ – 2018 ಹೆಸರಿನಲ್ಲಿ ಆಚರಿಸೋಕೆ ಸಜ್ಜಾಗಿದ್ದಾರೆ.
ವಿಶೇಶ ಅಂದ್ರೆ ಈ ಸರ್ತಿ ದರ್ಶನ್​ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

 

 

 

 

ಅದೇನಂದ್ರೆ ಅಭಿಮಾನಿಗಳು ಎಫ್​​ಬಿ ಫ್ಯಾನ್​​ ಪೇಜ್​​ ಮತ್ತು ದರ್ಶನ್​ಗೆ ಸಂಬಂಧಿಸಿದ ವಾಟ್ಸಪ್​ ಗ್ರೂಪ್​​ಗಳಲ್ಲಿ ದರ್ಶನ್​​ ಬರ್ತ್​ಡೇಯನ್ನು ವಿಭಿನ್ನವಾಗಿ ಸೆಲೆಬ್ರೇಟ್​ ಮಾಡ್ತಿದ್ದಾರೆ. ಹೌದು… ಇದನ್ನು ಕೇಳಿದ್ರೆ ನಿಮ್ಗೆ ನಿಮ್ಗೆ ಖಂಡಿತಾ ಆಶ್ಚರ್ಯ ಆಗುತ್ತೆ. ನೀವು ಫೇಸ್​​ಬುಕ್​ ಲಾಗಿನ್​ ಆಗಿ ಹುಡುಕಾಡಿದ್ರೆ ದರ್ಶನ್​​​ಗೆ ಸಂಬಂಧಿಸಿದ ಸುಮಾರು 200ಕಿಂತ್ಲೂ ಎಫ್​​ಬಿ ಪೇಜ್​​ಗಳು ಸಿಗುತ್ತೆ. ಇನ್ನು ರಾಜ್ಯದ ಹಳ್ಳಿ ಹಳ್ಳಿಯಲ್ಲಿ ಹೋಗಿ ಹುಡುಕಾಡಿದ್ರೆ ದರ್ಶನ್​​ ಹೆಸರಲ್ಲಿ ಹೆಚ್ಚು ಕಮ್ಮಿ 1000 ಕ್ಲಿಂತ್ಲೂ ಹೆಚ್ಚು ವಾಟ್ಸಪ್​​ ಗ್ರೂಪ್​ ಸಿಗುತ್ತೆ.

 

 

 

 

ಈಗ ಅಷ್ಟು ವಾಟ್ಸಪ್, ಎಫ್​ ಪೇಜ್ ಮತ್ತು ಟ್ವಿಟ್ಟರ್​​​​ನಲ್ಲಿ ದರ್ಶನ್​ ದುರ್ಯೋಧನನ ಗೆಟಪ್​ನಲ್ಲಿರೋ ಸೇಮ್​ ಫ್ರೊಫೈಲ್​ ಪಿಕ್​ ನೋಡೋಕೆ ಸಿಗುತ್ತೆ. ದರ್ಶನ್​ ಬರ್ತ್​ಡೇ ಇರೋದರಿಂದ ಈ ಒಂದು ತಿಂಗಳು ಎಲ್ಲಾ ಫ್ಯಾನ್ಸ್​ ತಮ್ಮ ಪೇಜ್​ ಮತ್ತು ಗ್ರೂಪ್​​ಗೆ ಒಂದೇ ರೀತಿಯ ಪ್ರೊಪೈಲ್​ ಪಿಕ್​ ಹಾಕಿ ನೆಚ್ಚಿನ ನಟನಿಗೆ ಅಭಿಮಾನ ಸಲ್ಲಿಸೋದಕ್ಕೆ ಡಿ ಫ್ಯಾನ್ಸ್​ ನಿರ್ಧರಿಸಿದ್ದಾರೆ.

 

ಅಲ್ಲದೆ ಲಕ್ಷಾಂತರ ಮಂದಿ ತಮ್ಮ ಪ್ರೊಪೈಲ್​​ ಪಿಕ್​ ಚೇಂಜ್​ ಮಾಡಿದ್ದಾರೆ.
ಅಭಿಮಾನಿಗಳ ಈ ಅಭಿಮಾನದ ಅಭಿಯಾನ ಕಂಡು ಖುದ್ದು ದರ್ಶನ್​ ಕೂಡ ದಂಗಾಗಿದ್ದಾರೆ. ಅವರಿಗೆ ಹೇಗೆ ಕೃತಜ್ಷತೆ ಸಲ್ಲಿಸ್ಬೇಕು ಅನ್ನೋದು ತಿಳಿಯದಾಗಿದೆ. ಇಂಥ ಅಭಿಮಾನಿಗಳನ್ನು ಪಡೆದ ದರ್ಶನ್​​ ಮತ್ತು ದರ್ಶನ್​​ನಂತ ನಟನನ್ನು ಪಡೆದ ಅಭಿಮಾನಿಗಳು ಇಬ್ಬರೂ ಭಾಗ್ಯವಂತರು.

Actor Darshan Shocks on Fans Celebrating his Birthday preparation.
Actor Darshan Shocks on Fans Celebrating his Birthday preparation.