ನಾಮಕರಣದ ಬಳಿಕ ಅರಮನೆಗೆ ಬಂದ ಆದ್ಯವೀರ್​- ಯದುವಂಶದ 28 ಕುಡಿ ಕಂಡು ಸಂಭ್ರಮಿಸಿದ ಜನತೆ!

Adyaveer's entry to Mysuru Palace after naming ceremony
Adyaveer's entry to Mysuru Palace after naming ceremony

ನಾಮಕರಣದ ಬಳಿಕ ಮೊದಲ ಬಾರಿಗೆ ಮೈಸೂರು ಅರಮನೆಗೆ ಆಗಮಿಸಿದ ಯದುವಂಶದ ಕುಡಿ ಆದ್ಯವೀರ್​​ ರಿಗೆ ಸಾಂಪ್ರದಾಯ ಬದ್ಧವಾಗಿ ಸ್ವಾಗತ ಕೋರಲಾಯಿತು.

ad

ಯದುವಂಶದ 28ನೇ ಕುಡಿ ಆದ್ಯವೀರ್​​​ ಮೈಸೂರು ಅರಮನೆ ಪ್ರವೇಶ ಮಾಡಿದ್ದು, ತಂದೆಯ ಮನೆಗೆ ಬಂದ ಯದುವಂಶದ ಕುಡಿಯನ್ನು ಸಂಭ್ರಮದಿಂದ ಸ್ವಾಗತಿಸಲಾಯ್ತು. ಮುತ್ತೈದೆಯರು ಆದ್ಯವೀರ್​ಗೆ ಕೆಂಪುನೀರಿನ ಹಾನ ತೆಗೆದು ಆರತಿಗೈಯ್ದು ಅರಮನೆಯೊಳಕ್ಕೆ ಸ್ವಾಗತಿಸಿದರು.

ನಾಮಕರಣದ ಬಳಿಕ ಇದೇ ಮೊದಲ ಬಾರಿಗೆ ಯದುವೀರ್​ ದಂಪತಿ ತಮ್ಮ ಕಂದನ ಜೊತೆ ಮೈಸೂರಿಗೆ ಆಗಮಿಸಿದ್ದರು. ಯದುವಂಶದ ಕಂದ ಆದ್ಯವೀರ್​ ನನ್ನು ನೋಡಲು ಅರಮನೆ ಸಿಬ್ಬಂದಿ ವರ್ಗ ಕಾತರದಿಂದ ಕಾಯುತ್ತಿತ್ತು.  ಇನ್ನು ಆದ್ಯವೀರ್​ ಅರಮನೆ ಪ್ರವೇಶದ ಬಳಿಕ ಮಾತನಾಡಿದ ಯದುವೀರ್​​ ನನ್ನ ಮಗ ಆದ್ಯವೀರ್​​ ಚೆನ್ನಾಗಿದ್ದಾ‌ನೆ. ನಾಮಕರಣ ಮುಗಿಸಿ ಮೈಸೂರಿಗೆ ಆಗಮಿಸಿದ್ದೇವೆ. ಬೆಂಗಳೂರಿನಲ್ಲಿ ನಾಮಕರಣ ಮಾಡಿದ್ದು ನಮ್ಮ ಅನುಕೂಲಕ್ಕಾಗಿ ಅಷ್ಟೇ. ಅದನ್ನ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ. ಶೀಘ್ರವೇ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇವೆ ಅಂದ್ರು.