ಯಕ್ಷಗಾನದಲ್ಲಿ ರಾಹುಲ್​ ಅನುಕರಣೆಗೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಕಲಾವಿದ!

Artist's suspension For imitation speech On Rahul Gandhi.
Artist's suspension For imitation speech On Rahul Gandhi.

ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣವೊಂದರಲ್ಲಿ ಬಸವಣ್ಣನವರ ವಚನ ಹೇಳಲು ಹೋಗಿ ತೀವ್ರ ಮುಜುಗರಕ್ಕೆ ಇಡಾಗಿದ್ದರು.

ad


ಇಷ್ಟೆ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಇದನ್ನೇ ಅನುಕರಿಸಲು ಹೋದ ಯಕ್ಷಗಾನ ಕಲಾವಿದನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದು, ರಾಹುಲ್​ ಗಾಂಧಿ ಅನುಕರಿಸಿದ್ದಕ್ಕೆ ಕಲಾವಿದನನ್ನು ಮೇಳದಿಂದ ಕೈಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇತ್ತೀಚಿಗೆ ಕರಾವಳಿಯಲ್ಲಿ ನಡೆದ ಯಕ್ಷಗಾನದಲ್ಲಿ ಕಟೀಲು ದುರ್ಗಾಪರಮೇಶ್ವರಿ ಮೇಳದ ಕಲಾವಿದ ಪೂರ್ಣೇಶ್ ಆಚಾರ್ ಎಂಬಾತ ಇವ್ ನರ್ವ್​ ಇವ ನರ್ವ್​ ಎಂಬುದನ್ನು ಅನುಕರಿಸಿದ್ದರು. ಇದು ಕೂಡ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಅಸಮಧಾನಗೊಂಡ ಕಾಂಗ್ರೆಸ್​ ಕಟೀಲು ಮೇಳಕ್ಕೆ ನೊಟೀಸ್ ರವಾನಿಸಿದ್ದರು ಎನ್ನಲಾಗಿದೆ. ಹೀಗಾಗಿ ಇದೀಗ ಮೇಳದ ವ್ಯವಸ್ಥಾಪಕರು ಪೂರ್ಣೇಶ ವಿರುದ್ಧ ಕ್ರಮಕ್ಕೆ ಮುಂಧಾಗಿದ್ದು ಆಟದ ಮೇಳದಿಂದ ಕೈಬಿಟ್ಟಿದ್ದಾರೆ. ಕರಾವಳಿಯಲ್ಲಿ ಕಟೀಲು ಮೇಳಕ್ಕೆ ಅತ್ಯಂತ ಗೌರವವಿದ್ದು, ಮೂರ್ನಾಲ್ಕು ವರ್ಷಗಳ ಕಾಲ ಕಾದು ಹರಕೆ ಮಾಡಿಸುವ ಭಕ್ತರಿದ್ದಾರೆ. ಆದರೇ ಇದೀಗ ಕಲಾವಿದನೊಬ್ಬ ರಾಹುಲ್ ಗಾಂಧಿ ಅನುಕರಿಸಲು ಹೋಗಿ ಎಡವಟ್ಟಾಗಿದ್ದು, ಮೇಳದ ಇತರ ಕಲಾವಿದರು ಮುಜುಗರ ಎದುರಿಸುವಂತಾಗಿದೆ.