ನಾಯಿ ಬಾಯಿಗೆ ಸಿಕ್ಕಿ ಹೈರಾಣಾದ ಹಸು!!

ಇತ್ತೀಚೆಗೆ ನಾಯಿ ಸಾಕುವ ಹವ್ಯಾಸ ಜನರಲ್ಲಿ ಹೆಚ್ಚುತ್ತಿದೆ. ಆದರೇ ನೀವು ನಾಯಿ ಸಾಕುವ ಮುನ್ನ ಅದು ಯಾವ ಜಾತಿಗೆ ಸೇರಿದ್ದು, ಅದರ ಲಕ್ಷಣಗಳೇನು ಅನ್ನೋದನ್ನು ತಿಳ್ಕೊಳ್ಳಿ. ಇಲ್ಲಾಂದ್ರೆ ಬೆಳಗಾವಿ ನಡೆದಂತದ್ದೇ ಘಟನೆ ನಿಮ್ಮೂರಲ್ಲೂ ನಡೆಯಬಹುದು. ಹೌದು ಬೆಳಗಾವಿಯ ಹಳ್ಳಿಯೊಂದರಲ್ಲಿ ರ್ಯಾಟ್​​ ವಿಲ್ಲರ್ ಅನ್ನೋ ನಾಯಿ ಅಕ್ಷರಷಃ ರಾಕ್ಷಸನಂತೆ ವರ್ತಿಸಿದ್ದು, ಹಸುವೊಂದರ ಮೇಲೆ ಮುಗಿಬಿದ್ದು, ರೌದ್ರಾವತಾರ ತಾಳಿದೆ.

adಬೆಳಗಾವಿಯ ಹಳ್ಳಿಯೊಂದರಲ್ಲಿ ಕಟ್ಟಿ ಹಾಕಲಾಗಿದ್ದ ಹಸುವಿನ ಕಿವಿಗೆ ಈ ರ್ಯಾಲ್​ ವಿಲ್ಲರ್ ಎಂಬ ಸಾಕು ನಾಯಿಯೊಂದು ಬಾಯಿ ಹಾಕಿದ್ದು, ಕಚ್ಚಿ ಹಿಡಿದುಬಿಟ್ಟಿದೆ. ಈ ನಾಯಿಯಿಂದ ಬಿಡಿಸಿಕೊಳ್ಳೋಕೆ ಸಾಧ್ಯವಾಗ ಹಸು ಒದ್ದಾಡಿದ್ದು, ಅದು ಕೂಗುತ್ತಿದ್ದನ್ನು ನೋಡಿದ್ರೆ ಕರುಳುಕಿತ್ತುಬರುವಂತಿತ್ತು.

 

ಇನ್ನು ಹಸುವಿನ ಕಿವಿಗೆ ಬಾಯಿ ಹಾಕಿದ ನಾಯಿಯನ್ನು ಓಡಿಸೋಕೆ ಸ್ಥಳೀಯರು ಶತಪ್ರಯತ್ನ ಮಾಡಿದರೂ ನಾಯಿ ಹಸುವಿನ ಕಿವಿ ಬಿಡಲೇ ಇಲ್ಲ. ಕಲ್ಲಿನಿಂದ ಥಳಿಸಿದ್ರೂ ನಾಯಿ ಹಸುವನ್ನು ಬಿಟ್ಟಿಲ್ಲ. ಹಸು ನೋವಿನಿಂದ ಕೂಗುತ್ತಲೇ ಇತ್ತು. ಕೊನೆಗೆ ಸ್ಥಳೀಯ ಯುವಕರು ಬಡಿಗೆಯಿಂದ ನಾಯಿಗೆ ಥಳಿಸಿ ಹಸುವನ್ನು ಅದರ ಬಾಯಿಯಿಂದ ರಕ್ಷಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್​ ಆಗಿದೆ. ​​​ಈ ರ್ಯಾಟ್​ ವಿಲ್ಲರ್ ಜಾತಿಯ ನಾಯಿಯನ್ನು ಹಂಟಿಂಗ್ ನಾಯಿ ಎಂದೇ ಕರೆಯಲಾಗುತ್ತದೆ. ಇದು ಯಾವುದಕ್ಕಾದರೂ ಬಾಯಿ ಹಾಕಿದರೇ ಮಾಂಸ ಕಿತ್ತುಕೊಳ್ಳುವವರೆಗೂ ಬಿಡೋದಿಲ್ಲ ಎನ್ನಲಾಗಿದೆ.