ಕೃಷ್ಣಲೀಲೆಗೆ ಭಾರಿ ಬೆಲೆ ತೆತ್ತ ರಾಮಾ- ಇದು ಡಾಕ್ಟರ್​​ ರಾಮಾಂಜಿಯ ಮೂರನೇ ಮ್ಯಾರೇಜ್ ಸ್ಟೋರಿ!!

ಆತ ವೃತ್ತಿಯಲ್ಲಿ ಜೀವ ಕಾಪಾಡುವ ವೈದ್ಯ. ಆದರೇ ಸಂಸಾರ ನೆಟ್ಟಗಿಟ್ಟುಕೊಳ್ಳಲಾಗದೇ ಹೆಂಡತಿಯಿಂದ ಹಿಗ್ಗಾಮುಗ್ಗಾ ಹೊಡೆತ ತಿಂದು ಸುದ್ದಿಯಾಗಿದ್ದಾನೆ. ಬಳ್ಳಾರಿಯ ನಿವಾಸಿ ಡಾ. ರಾಮು ಅಲಿಯಾಸ್ ರಾಮಾಂಜನೇಯ ಎಂಬಾತ ವೃತ್ತಿಯಲ್ಲಿ ವೈದ್ಯ ಆದರೇ ಪ್ರವೃತ್ತಿಯಲ್ಲಿ ಮಾತ್ರ ವಂಚಕ. ಹೌದು 10 ವರ್ಷಗಳ ಹಿಂದೆ ಪ್ರೀತಿ ಮದುವೆಯಾದವಳಿಗೆ ಕೈಕೊಟ್ಟ ರಾಮಾಂಜನೇಯ ಎರಡು ಮತ್ತು ಮೂರನೇ ಸಂಸಾರ ಹೂಡಿದ್ದ, ಈ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಮೊದಲ ಪತ್ನಿ ಸಖತ್ ಗೂಸಾ ನೀಡಿದ್ದಾಳೆ. ರಾಮಾಂಜನೇಯ ಕಳೆದ ಹತ್ತು ವರ್ಷದ ಹಿಂದೆ ಶಶಿರೇಖಾಳನ್ನು ಪ್ರೀತಿಸಿ ಮದುವೆಯಾಗಿದ್ದ. 2006 ರಲ್ಲಿ ಹಾಗೆ ಮದುವೆಯಾದ ರಾಮಾಂಜನೇಯ ಎರಡು ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರ ಮಾಡಿದ್ದ. ಶಶಿರೇಖಾ ಗರ್ಭಿಣಿಯಾಗಿದ್ದಾಗ ಆಕೆಗೆ ಕೈಕೊಟ್ಟು ಇನ್ನೊಬ್ಬಳ ತೆಕ್ಕೆಗೆ ಜಾರಿದ್ದಾನೆ. ಇದಲ್ಲದೇ ಮೂರನೇ ಮದುವೆಗೂ ಸಜ್ಜಾಗಿದ್ದ ರಾಮಾಂಜನೇಯ ತನ್ನ ಆಸ್ಪತ್ರೆಯ ನರ್ಸ್​ ಜೊತೆಗೆ ಲವ್ವಿ-ಡವ್ವಿ ಶುರುವಿಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಮೊದಲ ಪತ್ನಿ ಶಶಿರೇಖಾ ಆಸ್ಪತ್ರೆಗೆ ಬಂದು ಗಲಾಟೆ ತೆಗೆದಿದ್ದಾಳೆ. ಅಷ್ಟೇ ಅಲ್ಲ ತನಗೆ ಕೈಕೊಟ್ಟು ಬೇರೆಯವರ ಜೊತೆ ಚಕ್ಕಂದವಾಡುತ್ತಿದ್ದ ಗಂಡನಿಗೆ ಸಖತ್ತಾಗಿಯೇ ಗೂಸಾ ನೀಡಿದ್ದಾಳೆ.

ಈ ಮಧ್ಯೆ ಮೊದಲ ಪತ್ನಿ ಶಶಿರೇಖಾ ತಾಯಿ ತಾನು ಗಂಡಸಲ್ಲ ಎಂದು ನನಗೆ ಅವಮಾನ ಮಾಡಿದ್ದು, ಅದಕ್ಕಾಗಿ ನಾನು ಆಕೆಯನ್ನು ತ್ಯಜಿಸಿದ್ದೇನೆ. ಶಶಿರೇಖಾಗೆ ಜನಿಸಿರುವ ಮಗು ಕೂಡ ತನ್ನದ್ದಲ್ಲ ಅಂತಾನೇ ರಾಮಾಂಜನೇಯ. ಆದರೆ ಪತಿ ತನಗೆ ಬೇಕೆ ಬೇಕು ಎಂದು ಪಟ್ಟು ಹಿಡಿದಿರುವ ಶಶಿರೇಖಾ ಬೇಕಿದ್ದರೇ ಆತ ಡಿಎನ್​ಎ ಪರೀಕ್ಷೆ ಮಾಡಿಸಲಿ ಅಂತಿದ್ದಾಳೆ. ಆದರೇ ಇಷ್ಟೆಲ್ಲ ರಾದ್ಧಾಂತ ಕಾರಣವಾಗಿರೋ ರಾಮಾಂಜನೇಯ ಮಾತ್ರ ನಾನು ಜೈಲುವಾಸ ಅನುಭವಿಸುತ್ತೇನೆ ವಿನಃ ಶಶಿರೇಖಾ ಜೊತೆ ಮತ್ತೆ ಸಂಸಾರ ಮಾಡಲ್ಲ ಅಂತಿದ್ದಾನೆ. ಒಟ್ಟಿನಲ್ಲಿ ವೈದ್ಯರ ಮನೆ ಜಗಳ ಬೀದಿಗೆ ಬಿದ್ದಿದ್ದು, ಸಾರ್ವಜನಿಕ ವಲಯದಿಂದ ಟೀಕೆಗೆ ಗುರಿಯಾಗಿದೆ.