ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಗೋವಾಕ್ಕೂ ಬಿಜೆಪಿ ಪತ್ರವೆ ಮುಖ್ಯವಾಗಿದೆ-ಸಿಎಂ ಟೀಕೆ

ಹೆತ್ತವರಿಗೆ ಹೆಗ್ಗಣ ಮುದ್ದು. ಹಾಗೆಯೇ ಗೋವಾ ಸರ್ಕಾರಕ್ಕೂ ಬಿಜೆಪಿ ಪತ್ರವೇ ಮುಖ್ಯವಾಗಿದೆಯೇ ವಿನಃ ಕರ್ನಾಟಕ ಸರ್ಕಾರವಲ್ಲ.

ad ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಹಾಗೂ ಬಿಎಸ್​​ವೈ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆಯುತ್ತಿರುವ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಒಂದು ರಾಜ್ಯದ ಮುಖ್ಯಮಂತ್ರಿಗಳ ಪತ್ರಕ್ಕೆ ಗೌರವ ಕೊಡುವ ಸೌಜನ್ಯ ಪರಿಕ್ಕರಗಿಲ್ಲ.

 

ನನ್ನ ಬಗ್ಗೆ ಮಾತನಾಡುವ ಶೆಟ್ಟರ್​​ಗೆ ಮಹದಾಯಿ ವಿಚಾರದಲ್ಲಿ ನಾವು ಬರೆದ ಪತ್ರಗಳ ಅರಿವಿಲ್ಲವೆ ಎಂದು ಪ್ರಶ್ನಿಸಿದರು. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಕುಮಾರಸ್ವಾಮಿ ಆಧಾರ ರಹಿತ ಆರೋಪಗಳನ್ನ ಮಾಡ್ತಾರೆ ಅದಕ್ಕೆಲ್ಲ ಉತ್ತರ ಕೊಡೋ ಅಗತ್ಯವಿಲ್ಲ ಅಂದ ಸಿದ್ದರಾಮಯ್ಯ, ಬಯಲುಸೀಮೆ ಭಾಗಗಳಿಗೆ ಎತ್ತಿನಹೊಳೆ ಯೋಜನೆ ತರೋದು ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ ಎಂದು ಟೀಕಿಸಿದರು.