“ಎಲೆಕ್ಟ್ರಿಕ್ ಬಸ್ ಟೆಂಡರ್ ಮತ್ತೆ ರದ್ದು” ಗ್ರೀನ್ ಸಿಟಿಗೆ BMTC ಗ್ರೀನ್ ಸಿಗ್ನಲ್ ಯಾವಾಗ ?

BMTC decided to cancel the tender to lease e-buses.

ಬೆಂಗಳೂರಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಸಲು ಬಿಎಂಟಿಸಿ ಮುಂದಾದಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಮತ್ತೊಮ್ಮೆ ಟೆಂಡರ್ ರದ್ದುಗೊಳಿಸಿದೆ.

 

ಎಲೆಕ್ಟ್ರಿಕ್ ಬಸ್‌ಗಳ ಖರೀದಿಯ ಕುರಿತು ಕೇಂದ್ರ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿ ಭಾರತೀಯ ವಿಜ್ಞಾನ ಸಂಸ್ಥೆ ನೀಡಿರುವ ಸಾಧಕ-ಬಾಧಕ ವರದಿ ಆಧಾರವಾಗಿರಿಸಿಕೊಂಡು ವಿಸ್ತೃತ ಚರ್ಚೆ ನಡೆದಿದೆ. ಸಭೆಯಲ್ಲಿ ಇ-ಬಸ್‌ಗಳನ್ನು ಖರೀದಿಸಬೇಕೇ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಬೇಕೆ ಎನ್ನುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಎದ್ದವು.

 

ಕೇಂದ್ರ ಹಳೇ ಟೆಂಡರ್ ರದ್ದುಗೊಳಿಸಿ ಇ-ಬಸ್ ಖರೀದಿಗೆ ಮರು ಟೆಂಡರ್ ಕರೆಯಲಾಗುವುದು. ಹಳೆಯ ಟೆಂಡರ್‌ನಲ್ಲಿ ಹಲವು ಲೋಪಗಳಿದ್ದು. ದಿನಕ್ಕೆ ಎಷ್ಟು ಕಿ.ಮೀ ಕಡ್ಡಾಯವಾಗಿ ಓಡಿಸಬೇಕು. ಬ್ಯಾಟರಿ ಬಾಳಿಕೆ ಎಷ್ಟು, ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ಕಿ.ಮೀ ಓಡಲಿದೆ. ಬಸ್‌ಗಳು ಕೆಟ್ಟು ನಿಂತರೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸೂಕ್ತ ಮಾಹಿತಿ ಇರಲಿಲ್ಲ, ಹೀಗಾಗಿ ನಿಗಮ ಹೆಚ್ಚಿನ ಅಪಾಯ ಮೈಮೇಲೆ ಎಳೆದುಕೊಳ್ಳಲು ತಯಾರಿಲ್ಲ ಎಂದು ಹೇಳಿದೆ.