ಎಂ.ಬಿ.ಪಾಟೀಲ್​ ಅತೃಪ್ತಿಗೆ ಬಿತ್ತು ಬ್ರೇಕ್​- ಗೆಸ್ಟ್​​ಹೌಸ್​ಗೆ ಕರೆಸಿ ವಾರ್ನಿಂಗ್ ಮಾಡಿದ್ದ್ಯಾರು ಗೊತ್ತಾ?!

ಒಂದೆಡೆ ಶತಾಯ-ಗತಾಯ ಅಧಿಕಾರ ಹಿಡಿದಿರೋ ಕಾಂಗ್ರೆಸ್​ ಗೆ ಅಧಿಕಾರ ಉಳಿಸಿಕೊಳ್ಳೋ ಕಸರತ್ತಿನಲ್ಲಿದ್ದರೇ ಇನ್ನೊಂದೆಡೆ ಸಚಿವ ಸ್ಥಾನ ವಂಚಿತರು ಬಂಡಾಯದ ಬಾವುಟ ಹಾರಿಸುತ್ತಲೇ ಇದ್ದಾರೆ. ಇದರಲ್ಲಿ ಎಂ.ಬಿ.ಪಾಟೀಲ್ ಕೂಡ ಒಬ್ಬರು. ಯಾರು ಸಮಾಧಾನ ಮಾಡಿದ್ರು ಸಮಾಧಾನಗೊಳ್ಳದ ಎಂ.ಬಿ.ಪಾಟೀಲ್​ಗೆ ಈಗ ಕಾಂಗ್ರೆಸ್​ ರಾಜ್ಯ ಉಸ್ತುವಾರಿಯೇ ಶಿಸ್ತಿನ ಪಾಠ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್​​ ಪಾಲಿಗೆ ಅತ್ಯಂತ ಹೆಚ್ಚು ತಲೆನೋವಾಗಿದ್ದು ಎಂ.ಬಿ.ಪಾಟೀಲ್​ ಬಂಡಾಯ. ದಿನೇಶ್ ಗುಂಡೂರಾವ್, ಕೃಷ್ಣಭೈರೈಗೌಡ್​ ಸೇರಿ ಹಲವರು ಮನವೊಲಿಸಿದರು ಎಂ.ಬಿ.ಪಾಟೀಲ್​ರು ಜಗ್ಗಲೇ ಇಲ್ಲ. ಹೀಗಾಗಿ ಬಂಡಾಯವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಮುಂಧಾಗಿರುವ ಕಾಂಗ್ರೆಸ್​ ಖಡಕ್​ ವಾರ್ನಿಂಗ್​ ನೀಡುತ್ತಿದೆ.ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡಿರೋ ಮಾಜಿ ಸಚಿವ ಎಂ.ಬಿ.ಪಾಟೀಲ್​​ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್​​​​ ವಾರ್ನಿಂಗ್ ನೀಡಿದ್ದಾರೆ.

ad

ಕೆಕೆ ಗೆಸ್ಟ್​ಹೌಸ್​ನಲ್ಲಿ ಉಳಿದುಕೊಂಡಿದ್ದ ವೇಣುಗೋಪಾಲ್​ ಅತೃಪ್ತ ಶಾಸಕರನ್ನು ಕರೆಸಿ ಮಾತುಕತೆ ನಡೆಸಿದ್ರು. ಈ ವೇಳೆ ಎಂ.ಬಿ.ಪಾಟೀಲ್​ ಅವ್ರನ್ನೂ ಕರೆಸಿ ಪ್ರತ್ಯೇಕ ಚರ್ಚೆ ಮಾಡಿದ ವೇಣುಗೋಪಾಲ್​​, ಯಾವುದೇ ಕಾರಣಕ್ಕೂ ಶಾಸಕರ ಸಭೆ ನಡೆಸಬಾರದು. ಹೈಕಮಾಂಡ್​ ಎಲ್ಲವನ್ನೂ ಗಮನಿಸುತ್ತಿದೆ. ನೀವು ಮಾಡ್ತಿರೋದನ್ನ ಯಾರೂ ಸಹಿಸಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿ ಕಳಿಸಿದ್ದಾರೆ ಎನ್ನಲಾಗ್ತಿದೆ.