ತೀವ್ರ ಎದೆನೋವಿನ ಹಿನ್ನೆಲೆ ಕ್ರಿಕೆಟಿಗ ಲಾರಾ ಆಸ್ಪತ್ರೆಗೆ ದಾಖಲು! ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ!!

ವೆಸ್ಟ್​ ಇಂಡೀಸ್​ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಎದೆನೋವಿನಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬ್ರಿಯಾನ್ ಲಾರಾ ಅವರನ್ನು ಪ್ಯಾರೆಲ್​ ಪ್ರದೇಶದ ಗ್ಲೋಬಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ad


ಬ್ರಿಯಾನ್​ ಲಾರಾ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರವನ್ನು ಎಎನ್​ಐ ಖಚಿತಗೊಳಿಸಿದ್ದು, ಅವರ ಆರೋಗ್ಯ ಸ್ಥಿತಿ ಸಧ್ಯ ಹೇಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸಧ್ಯ ಬ್ರಿಯಾನ್ ಲಾರಾ, ಸ್ಟಾರ್ ಸ್ಪೋರ್ಟ್ಸ್​​ನ ಕ್ರಿಕೆಟ್​ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರೋದರಿಂದ ಭಾರತದಲ್ಲೇ ವಾಸ್ತವ್ಯ ಹೂಡಿದ್ದಾರೆ.


ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಲಾರಾ, ಟೆಸ್ಟ್​ ಪಂದ್ಯದಲ್ಲಿ 400 ರನ್ ಸಿಡಿಸಿದ ಮೊದಲ ಬ್ಯಾಟ್ಸಮನ್ ಎಂಬ ದಾಖಲೆಯನ್ನು ಇನ್ನು ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ. 131 ಟೆಸ್ಟ್ ಹಾಗೂ 299 ಏಕದಿನ ಪಂದ್ಯಗಳಲ್ಲಿ ಲಾರಾ ಆಟವಾಡಿದ್ದಾರೆ.