ಯುವತಿ ಅತ್ಯಾಚಾರ ಯತ್ನದ ವಿಡಿಯೋ ವೈರಲ್ ! ಅತ್ಯಾಚಾರಕ್ಕೆ ಸಾಥ್ ನೀಡಿದವಳೇ ಮತ್ತೊಬ್ಬಳು ಯುವತಿ !!

Caught on Camera: Man Tried to Rape on Girl.
Caught on Camera: Man Tried to Rape on Girl.

ನಿರ್ಭಯಾ ಪ್ರಕರಣ ದೇಶದ ಜನರ ನೆನಪಿನಿಂದ ಮಾಸುವ ಮುನ್ನವೇ ನಮ್ಮ ದೇಶದಲ್ಲಿ ಇಂತಹುದೇ ಘಟನೆ ಮತ್ತೆ-ಮತ್ತೆ ನಡೆಯುತ್ತಲೇ ಇದೆ.  ಇದೀಗ ಇಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೆಣ್ಣುಮಕ್ಕಳನ್ನ, ಹೆಣ್ಣುಹೆತ್ತವರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಆಂಧ್ರಪ್ರದೇಶದ ಕರ್ನೂಲನಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೀಚಕರು, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇಂತಹ ಹೀನ ಕೃತ್ಯಕ್ಕೆ ಸಾಥ್​​ ಕೊಟ್ಟಿದ್ದು ಮತ್ತೊಬ್ಬ ಪಾಪಿ ಹೆಣ್ಣು ಅನ್ನೋದೆ, ನಿಜಕ್ಕೂ ಆಶ್ಚರ್ಯಕರವೆನಿಸಿದೆ. ನನ್ನನ್ನು ದಯವಿಟ್ಟು ಬಿಟ್ಟು ಬಿಡಿ ಅಂತಾ ಆ ಯುವತಿ ದೈನ್ಯತೆಯಿಂದ ಬೇಡಿಕೊಂಡರು, ಆಕೆಯನ್ನು ಬಿಡದ ಕಾಮುಕರು ಆಕೆಯ ಬಟ್ಟೆಯನ್ನ ಎಳೆದಾಡಿದ್ದಾರೆ. ಇಷ್ಟೇ ಅಲ್ಲದೆ ಈ ಎಲ್ಲಾ ಹೀನ ಕೃತ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.

ಕಾಮುಕ ಆ ಯುವತಿಯನ್ನು  ಎಳೆದಾಡುತ್ತಿದ್ದರು. ಜೊತೆಯಲ್ಲಿದ್ದ ಇನ್ನೊರ್ವ ಯುವತಿ ಕಾಮುಕನಿಗೆ ಸಾಥ್​ ನೀಡಿದ್ದು,  ಆ ಯುವತಿ ಮೇಲೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇನ್ನು ಕೂಡ ದೇಶದಲ್ಲಿ ಮಹಿಳೆಯರ ಸುರಕ್ಷವಾಗಿಲ್ಲ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ.