ಮಂಡ್ಯ ಗ್ರಾ.ಪಂ ಕಚೇರಿಯಲ್ಲೇ ಪಿಡಿಓ ಲಂಚದಾಟ!!

Caught on CCTV: Gram Panchayat PDO Officer's Live Bribe Case At Mandya.
Caught on CCTV: Gram Panchayat PDO Officer's Live Bribe Case At Mandya.

ಸರ್ಕಾರಗಳು ಭ್ರಷ್ಟಾಚಾರ ತೊಡೆದುಹಾಕಲು ಸಾಕಷ್ಟು ಸರ್ಕಸ್​ ನಡೆಸುತ್ತವೆ. ಆದರೇ ಇತ್ತೀಚಿಗೆ ಗ್ರಾಮ ಮಟ್ಟದ ಆಡಳಿತದಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪಿಡಿಓ ಒಬ್ಬರು ಲಂಚ ಸ್ವೀಕರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಡ್ಯ ಜಿಲ್ಲೆ ಮದ್ದೂರಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ad
ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ಪಿಡಿಓ ಸಿದ್ದರಾಜು ಎಂಬಾತನೇ ಲಂಚ ಸ್ವೀಕಾರ ಮಾಡೋವಾಗ ರೆಡ್​​​​ಹ್ಯಾಂಡಾಗಿ ಸಿಕ್ಕಿಬಿದ್ದ ಪಿಡಿಓ. ವ್ಯಕ್ತಿಯೊಬ್ಬರು ತಮ್ಮ ಕೆಲಸಕ್ಕೆ ಕಚೇರಿಗೆ ಬಂದಿದ್ದು, ಮೊದಲು ಅರ್ಜಿಯೊಂದನ್ನು ಪಿಡಿಓ ಕೈಗೆ ನೀಡುತ್ತಾನೆ. ಸ್ವಲ್ಪ ಹೊತ್ತು ಮಾತುಕತೆ ನಡೆಸಿದ ಬಳಿಕ ಆ ವ್ಯಕ್ತಿ ಜೇಬಿನಿಂದ ನೋಟಿನ್ ಕಂತೆಯೊಂದನ್ನೆ ತೆಗೆದು ಪಿಡಿಓಗೆ ನೀಡಿದ್ದಾನೆ. ಬಳಿಕ ಹಣ ಸ್ವೀಕರಿಸಿದ ಪಿಡಿಓ ಈ ಹಣವನ್ನು ಕಚೇರಿಯ ಡ್ರಾದೊಳಗೆ ಹಾಕುವ ದೃಶ್ಯ ಕಚೇರಿಗೆ

ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ.

ಇನ್ನು ಪಿಡಿಓ ಲಂಚ ಸ್ವೀಕರಿಸುವ ದೃಶ್ಯ ಲಭ್ಯವಾಗುತ್ತಿದ್ದಂತೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಬಂದಿರೋ ಪಿಡಿಓ ಯಾವುದೇ ಕೆಲಸಕ್ಕೂ ಲಂಚಕ್ಕೆ ಬೇಡಿಕೆ ಇಡ್ತಾರೆ. ಆದ್ರೆ ನಮ್ಗೆ ಸಾಕ್ಷಿ ಸಿಕ್ಕಿರಲಿಲ್ಲ.ಈಗ ಸಾಕ್ಷಿ ಸಿಕ್ಕಿದ್ದು, ಕೂಡಲೇ ಜಿಪಂ ಸಿಇಓ ಇವ್ರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಗ್ರಾಮ ಪಂಚಾಯತ್​ಗಳಲ್ಲೇ ಲಂಚದ ಹಾವಳಿ ಎಲ್ಲೇ ಮೀರಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.