ಹೀಗೂ ಆತ್ಮಹತ್ಯೆ ಮಾಡಿಕೊಳ್ತಾರಾ?

Caught On CCTV: Man committe suicide in Hassan.
Caught On CCTV: Man committe suicide in Hassan.

ಌಕ್ಸಿಡೆಂಟ್​ಗೆ ಸಿಸಿಟಿವಿ ಟ್ವಿಸ್ಟ್​

ನಿನ್ನೆ ಹಾಸನದ ರೈಲ್ವೆ ಗೇಟ್ ಬಳಿ ಒಂದು ಅಪಘಾತ ನಡೆದಿತ್ತು. ಒಬ್ಬ ವ್ಯಕ್ತಿಯ ಮೇಲೆ ಬಸ್ ಹಾದು ಸ್ಠಳದಲ್ಲೇ ಸಾವನ್ನಪ್ಪಿದ್ದ. KSRTC ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಅಂತ ಪೋಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಸಿಸಿಟಿವಿ ವಿಡಿಯೋ ಇದಲ್ಲದಕ್ಕೂ ಸ್ಪಷ್ಟ ಉತ್ತರ ನೀಡಿದೆ.

ಹೌದು. ಅಪಘಾತ ನಡೆದ ಸ್ಥಳದಲ್ಲಿನ ಸಿಸಿಟಿವಿ ವಿಡಿಯೋ ತೆಗೆದು ನೋಡಿದಾಗ ಎಲ್ಲರೂ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

ಅದು ಬಸ್ ಚಾಲಕನ ನಿರ್ಲಕ್ಷ್ಯವಲ್ಲ ಅನ್ನುವುದು ಸಾಬೀತು ಮಾಡಿಸಿದೆ ಆ ವಿಡಿಯೋ. ದೂರದಿಂದ ನೋಡಿದಾಗ ಮಾನಸಿಕ ಅಸ್ವಸ್ಥನಂತೆ ಕಂಡು ಬರುವ ಈತ ಬಸ್ ಬರುವುದನ್ನೆ ಕಾಯುತ್ತಿದ್ದ.

ರಸ್ತೆ ಹಂಪ್ ಪಕ್ಕದಲ್ಲಿ ನಿಂತು ಬಸ್ ಬರುವುದನ್ನ್ನೇ ಕಾದು ಬಸ್ಸಿನ ಹಿಂದ ಚಕ್ರಕ್ಕೆ ತಲೆ ಕೊಟ್ಟಿದ್ದಾನೆ. ಅಲ್ಲಿಗೆ ಇದು ಅಪಘಾತವಲ್ಲ ಆತ್ಮಹತ್ಯೆ ಎನ್ನುವುದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಡವನು ಯಾರೆಂಬುದು ತಿಳಿದು ಬಂದಿಲ್ಲ. ಸಿಸಿಟಿವಿ ಪರಿಶೀಲನೆ ಬಳಿಕ ಹೊರಬಿದ್ದ ನೈಜ ಘಟನೆಯ ದೃಶ್ಯಾವಳಿ ಬಳಿಕ ಚಾಲಕನ ತಪ್ಪಿಲ್ಲ ಅಂತ ಮನವರಿಕೆಯಾಗಿದೆ. ನಿನ್ನೆ ನಡೆದಿದ್ದ ಅಪಘಾತ ಪ್ರಕರಣ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.