ಆಕ್ಸಿಡೆಂಟ್​​ನ ದೃಶ್ಯ ನೋಡಿ ಬೆಚ್ಚಿ ಬೀಳ್ತಿರಾ!!

Caught On CCTV: Man Dies After hits into Car in Chikmagalur.
Caught On CCTV: Man Dies After hits into Car in Chikmagalur.

ಅಪಘಾತಗಳು ಕ್ಷಣಮಾತ್ರದಲ್ಲಿ ನಡೆದು ಹೋಗುತ್ತವೆ. ಹೀಗಾಗಿ ಕೆಲವೊಮ್ಮೆ ರಸ್ತೆಯಲ್ಲಿ ನಡೆದ ಅಪಘಾಗಳಲ್ಲಿ ಸರಿ-ತಪ್ಪು ನಿರ್ಧರಿಸೋದೆ ಕಷ್ಟವಾಗುತ್ತದೆ. ಅಂತಹುದೇ ಅಪಘಾತವೊಂದು ಚಿಕ್ಕಮಗಳೂರಿನಲ್ಲಿ ನಡೆದಿದ್ದು, ದಾರಿಹೋಕ ಮೇಲೆ ಕಾರೊಂದು ಎರಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

adಆದರೇ ದಾರಿಹೋಕ ಹೇಗೆ ಸಾವನ್ನಪ್ಪಿದ ಎಂಬುದೇ ತನಿಖಾದಿಕಾರಿಗಳಿಗೆ ಗೊತ್ತಾಗಿರಲಿಲ್ಲ. ಇದೀಗ ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ಪೂಟೇಜ್​​ ಅಪಘಾತದ ತೀವ್ರತೆಯನ್ನು ಕಟ್ಟಿಕೊಟ್ಟಿದ್ದು, ನೋಡಿದರೇ ಬೆಚ್ಚಿ ಬೀಳುವಂತಿದೆ.

 

ಚಿಕ್ಕಮಗಳೂರಿನ ರಾಮನಹಳ್ಳಿಯಲ್ಲಿ 65 ವರ್ಷದ ವೃದ್ಧ ಹಾಲಪ್ಪ ಎಂಬಾತ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕೆಂಪು ಕಾರೊಂದು ಆತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸ್ಥಳೀಯರು ಕಾರನ್ನು ಫಾಲೋಮಾಡಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.