ಬಟ್ಟೆ ಒಣ ಹಾಕಲೂ ಸಿಸಿ ಕ್ಯಾಮರಾ !! ಇಲ್ಲಿ ಹಳೆ ಬಟ್ಟೆಗೂ ಕಳ್ಳರಿದ್ದಾರೆ !!

Caught on CCTV: Thieves stole clothes in Hubli.

ಇತ್ತೀಚಿಗೆ ಚಿತ್ರ-ವಿಚಿತ್ರ ಕಳ್ಳರೆಲ್ಲ ಹುಟ್ಟಿಕೊಂಡಿದ್ದಾರೆ ನೋಡಿ, ಕಾರು,ಬೈಕ್​,ಚಿನ್ನಾಭರಣ,ಮೊಬೈಲ್​ ಕದಿಯೋರನ್ನು ನೀವು ನೋಡ್ತಿರಾ ಆದರೇ ಹಳೆ ಬಟ್ಟೆ ಕದಿಯೋರನ್ನು ನೋಡಿದ್ದೀರಾ? ಹುಬ್ಬಳ್ಳಿಯಲ್ಲಿ ಇಂತಹ ಕಳ್ಳರು ಕಂಡುಬಂದಿದ್ದು, ಹೀಗೆ ಬಟ್ಟೆಯನ್ನು ಬಿಡದ ಕದ್ದ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಾಣಿಜ್ಯ ನಗರಿಯ ಜನತೆ ಬೆಚ್ಚಿ ಬಿದ್ದಿದ್ದಾರೆ.

Caught on CCTV: Thieves stole clothes in Hubli.
Caught on CCTV: Thieves stole clothes in Hubli.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಪ್ರಕಾಶ ಕ್ಯಾರಕಟ್ಟಿಯವರ ಮನೆ ಮುಂದೆ ತೊಳೆದು ಒಣಗಿಸಲಾದ ಬಟ್ಟೆಯೂ ಕಳ್ಳತನವಾಗಿತ್ತು. ಬಟ್ಟೆಯನ್ನು ಕದ್ದ ಕಳ್ಳರು ಯಾರಿರಬಹುದು ಎಂದು ಮನೆಗೆ ಹಾಕಲಾದ ಸಿಸಿಟಿವಿ ಪರಿಶೀಲಿಸಿದ ಮನೆಯವರಿಗೆ ಅಚ್ಚರಿ ಕಾದಿತ್ತು. ಹೌದು ಮನೆಗೆ ಮಧ್ಯರಾತ್ರಿ ಬಂದ ಮೂವರು ಅಗಂತುಕರು ಮನೆ ಮುಂದೇ ಒಣಗಿಸಲಾದ ಬಟ್ಟೆಗಳನ್ನು ಕದ್ದಿದ್ದಾರೆ. ಅಷ್ಟೇ ಅಲ್ಲ ಅಲ್ಲಿರುವ ವಾಹನಗಳಿಂದ ಪೆಟ್ರೋಲ್​ ಕೂಡ ಕಳ್ಳತನ ಮಾಡಿ ಕೈಚಳಕ ತೋರಿದ್ದಾರೆ.

Caught on CCTV: Thieves stole clothes in Hubli.
Caught on CCTV: Thieves stole clothes in Hubli.

ಸಿಸಿಟಿವಿ ದಾಖಲಾದ ದೃಶ್ಯ ಕಂಡು ಬೆಚ್ಚಿಬಿದ್ದ  ಪ್ರಕಾಶ್ ಕ್ಯಾರಕಟ್ಟಿ ಕುಟುಂಬ ಸಿಸಿಟಿವಿ ದೃಶ್ಯ ಆಧರಿಸಿ ಸ್ಥಳೀಯ ಪೊಲೀಸ್ ಠಾಣೆಗೆ  ದೂರು ನೀಡಿದೆ. ಗೋಕುಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಟ್ಟೆಯನ್ನು ಬಿಡದೆ ಕದಿಯುವ ಕಳ್ಳರಿಗಾಗಿ  ಬಲೆ ಬೀಸಿದ್ದಾರೆ. ನೀವು ನಿಮ್ಮ ಮನೆ ಮುಂದೇ ಬಟ್ಟೆ ಒಣಗಿಸುವ ಮುನ್ನ ಎಚ್ಚರವಿರಲಿ.

Watch Here:  https://youtu.be/BIE6J136hSI