ನೋಡ-ನೋಡುತ್ತಿದ್ದಂತೆ ಕುಸಿದು ಬಿತ್ತು ವಾಟರ್ ಟ್ಯಾಂಕ್​​- ಮೈಜುಮ್ಮೆನಿಸುವ ದೃಶ್ಯ ಮೊಬೈಲ್​ನಲ್ಲಿ ಸೆರೆ!!

Caught On CCTV: Water Tank Fell Down In Vijayapura.

ಕಾಮಗಾರಿಗಳು ನಡೆಯುವಾಗ ದುರಂತಗಳು ನಡೆಯೋದು ಸಾಮಾನ್ಯ. ಇಲ್ಲೂ ನಡೆದಿದ್ದು ಅದೇ, ಬೃಹತ ಗಾತ್ರದ ವಾಟರ್ ಟ್ಯಾಂಕ್​ ಬೀಳಿಸುವ ವೇಳೆ ವಾಟರ್​ ಟ್ಯಾಂಕ್​ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್​ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಬಿಜಾಪುರದ ಮುದ್ದೇಬಿಹಾಳ ತಾಲೂಕೊನ ನಾಲತವಾಡ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ. ಇಲ್ಲಿ ಶೀಥಿಲಗೊಂಡಿದ್ದ ವಾಟರ್ ಟ್ಯಾಂಕ್​​ನ್ನು ಬೀಳಿಸಬೇಕೆಂದು ನಿರ್ಧರಿಸಿದ್ದ ನಾಲತವಾಡ ಪಂಚಾಯತ್​ನವರು ಅದಕ್ಕಾಗಿ ಕಾಮಗಾರಿ ಆರಂಭಿಸಿದ್ದರು. ಈ ವೇಳೆ ಹಿಟಾಚಿ ಬಳಸಿ ವಾಟರ್​ ಟ್ಯಾಂಕ್​ ಬೀಳಿಸುವ ಪ್ರಯತ್ನ ನಡೆದಿತ್ತು.
ಆದರೇ ಕಾಮಗಾರಿ ಆರಂಭಿಸುತ್ತಿದ್ದಂತೆ ಬೃಹತ್ ಗಾತ್ರದ ವಾಟರ್ ಟ್ಯಾಂಕ್​ ಧೀಡಿರ ಕುಸಿದು ಬಿದ್ದಿದೆ. ಈ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದ್ದು, ಈಗ ಸಖತ್​ ವೈರಲ್​ ಆಗಿದೆ.

 

 

ಅದೃಷ್ಟವಶಾತ ಟ್ರ್ಯಾಕ್ಟರ್​ ಡ್ರೈವರ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಟ್ಯಾಂಕ್​ ಬೀಳಿಸುವ ದೃಶ್ಯ ನೋಡಲು ಬಂದಿದ್ದ ಜನರು ಹೀಗೆ ಟ್ಯಾಂಕ್​ ಉರುಳಿ ಬೀಳುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸಿನಿಮಾ ದೃಶ್ಯಗಳಂತೆ ಟ್ಯಾಂಕ್​ ಉರುಳಿ ಬಿದ್ದಿದ್ದು ನೋಡುಗರ ಮೈ ಜುಮ್ಮೆನಿಸುವಂತಿದೆ. ಈ ಘಟನೆಯಿಂದ ಬೆಚ್ಚಿದ ಹಿಟಾಚಿ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ.