ಸ್ಕೂಟಿಯಲ್ಲಿ ಬಂದಾಕೆ ಕದ್ದಿದ್ದು ಮೂಟೆ ಉಪ್ಪು!!

Caught on CCTV: Woman Steals Salt from in front of shop.

ಉಪ್ಪು ಶ್ರೇಷ್ಟವಾದ ವಸ್ತು. ಆದರೇ ಉಪ್ಪು ಕದ್ದರೇ ಊಟಬಾಧೆ ಕಾಡುತ್ತೆ ಅಂತಾರೆ. ಹೀಗಾಗಿಯೇ ಇವತ್ತಿಗೂ ಹಳ್ಳಿ,ಪಟ್ಟಣ,ನಗರಗಳಲ್ಲಿ  ಅಂಗಡಿಗಳ ಮುಂದೇ ಉಪ್ಪಿನ ಚೀಲವನ್ನು ಮುಕ್ತವಾಗಿ ಬಿಟ್ಟು ಹೋಗಿರುತ್ತಾರೆ. ಉಪ್ಪನ್ನು ಯಾರು ಕದಿಯುವುದಿಲ್ಲ ಅನ್ನೋದು ಎಲ್ಲರ ನಂಬಿಕೆ. ಆದರೇ  ನಿಮ್ಮೆಲ್ಲರ ನಂಬಿಕೆ ಸುಳ್ಳಾಗಿದೆ. ಹೌದು ಇಲ್ಲೊಬ್ಬಳು ಚಾಲಾಕಿ ಕಳ್ಳಿ ಮೂಟೆ ಮೂಟೆ ಉಪ್ಪು ಕದ್ದಿದ್ದು,  ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ಕಂಡು ಸಾರ್ವಜನಿಕರು ಕಂಗಲಾಗಿದ್ದಾರೆ.

ಹೌದು  ನಗರವೊಂದರ ಅಂಗಡಿಗೆ ನವೆಂಬರ್​ 25 ರ ರಾತ್ರಿ  ಸ್ಕೂಟಿಯಲ್ಲಿ ಬಂದ ಮಹಿಳೆ ಉಪ್ಪು ಕದಿಯಲು ಹೊಂಚು ಹಾಕಿದ್ದಾಳೆ. ಮುಚ್ಚಿದ ಅಂಗಡಿ ಎದುರು ಅರ್ಧಗಂಟೆ ಕಾಲ ನಿಂತ ಆಕೆ ಯಾರಾದ್ರೂ ಬರುತ್ತಾರಾ ಎಂಬುದು ಸರಿಯಾಗಿ ಗಮನಿಸಿದ್ದಾಳೆ. ವಾಹನಗಳೆಲ್ಲ ಪಾಸಾಗಿ ಹೋಗಿದನ್ನು ಖಚಿತ ಪಡಿಸಿಕೊಂಡ ಯುವತಿ ಒಮ್ಮೆ ಅಂಗಡಿ ಬಳಿ ಹೋಗಿ ಮೂಟೆಯಲ್ಲಿರುವ ಉಪ್ಪನ್ನು ಚೆಕ್ ಮಾಡಿ ವಾಪಸ್ಸಾಗಿದ್ದಾಳೆ.

 

ಮತ್ತೆ ಕೆಲ ಹೊತ್ತು ವೇಟ್​ ಮಾಡಿದ ಯುವತಿ ಕೊನೆಗೆ ಗಾಡಿ ನಿಲ್ಲಿಸಿ ಚೀಲದ ಬಳಿ ತೆರಳಿ ಅನಾಮತ್ತಾಗಿ ಒಂದು ಚೀಲ ಉಪ್ಪಿನ ಚೀಲವನ್ನು ಎತ್ತಿಕೊಂಡು ಬಂದು ಗಾಡಿಗೆ ಹಾಕಿಕೊಂಡಿದ್ದಾಳೆ. ಇಷ್ಟಕ್ಕೆ ಸಮಾಧಾನಗೊಳ್ಳದ ಆಕೆ ಮತ್ತೆ ಅಂಗಡಿ ಎದುರು ಇದ್ದ ಮತ್ತೊಂದು ಅರ್ಧಖಾಲಿಯಾದ ಉಪ್ಪಿನ ಚೀಲವನ್ನು ಎತ್ತಿ ಗಾಡಿಗೆ ಹಾಕಿಕೊಂಡು ಪರಾರಿಯಾಗಿದ್ದಾಳೆ. ಈ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದು,  ಉಪ್ಪು ಕದ್ದ ಮಹಿಳೆ ಕಂಡು ಜನರು ಅಚ್ಚರಿ ಪಡುತ್ತಿದ್ದಾರೆ.