ಸ್ಕೇಟಿಂಗ್​​ ರಿಂಕ್​ನಲ್ಲಿ ನಡೆದೇ ಹೋಯಿತು ಫೈಟಿಂಗ್​​​!!

Championship: two skating Players battled in the skating rink at Mangalore.
Championship: two skating Players battled in the skating rink at Mangalore.

ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 33 ನೇ ಸ್ಕೇಟಿಂಗ್ ಚಾಂಪಿಯನ್ ಶಿಪ್ ಈಗ ಹೊಡೆದಾಟದ ಕಾರಣಕ್ಕೆ ಸುದ್ದಿಯಾಗಿದೆ. ಹೌದು ರಾಜ್ಯ ಮಟ್ಟದ ಚಾಂಪಿಯನ್ ಶಿಪ್ನಲ್ಲಿ ಇಬ್ಬರು ಸ್ಕೇಟಿಂಗ್ ಪಟುಗಳು ಸ್ಕೇಟಿಂಗ್ ರಿಂಕ್ನಲ್ಲೇ ಹೊಡೆದಾಡಿಕೊಂಡಿರುವ ಮಂಗಳೂರಿನಲ್ಲಿ ನವೆಂಬರ್ 26 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Championship: two skating Players battled in the skating rink at Mangalore.
Championship: two skating Players battled in the skating rink at Mangalore.

ಮಂಗಳೂರಿನ ಹೊಗೈಬೈಲ್ನಲ್ಲಿರುವ ಫ್ರಾನಿಸ್ಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫ್ಲೈ ಸ್ಕೇಟಿಂಗ್ ಕ್ಲಬ್ ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯಶಿಪ್ ಆಯೋಜಿಸಿತ್ತು. ಈ ವೇಳೆ 16 ವರ್ಷ ಮೇಲ್ಪಟ್ಟ ವಿಭಾಗದ ಫೈನಲ್ ಪಂದ್ಯದ ವೇಳೆ ಬೆಂಗಳೂರಿನ ರಾಘವೇಂದ್ರ ಹಾಗೂ ಅಂಕಿತ್ ಎಂಬ ಸ್ಕೇಟರ್ಗಳು ಫಿನಿಶ್ ಲೈನ್ ದಾಟುವ ಮೊದಲೇ ಉದ್ದೇಶ ಪೂರ್ವಕವಾಗಿಯೇ ಡಿಕ್ಕಿ ಹೊಡೆದು ಬಿದ್ದರು. ಬಿದ್ದ ತಕ್ಷಣ ಸ್ಕೇಟಿಂಗ್ ಪಟು ರಾಘವೇಂದ್ರ ಇನ್ನೋರ್ವ ಸ್ಕೇಟಿಂಗ್ಪಟು ಅಂಕಿತ್ಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಬಳಿಕ ರೆಫ್ರಿಗಳು ಜಗಳವನ್ನು ಬಿಡಿಸಿದ್ದಾರೆ.

Championship: two skating Players battled in the skating rink at Mangalore.
Championship: two skating Players battled in the skating rink at Mangalore.

ಈ ಘಟನೆಯನ್ನು ಪ್ರೇಕ್ಷಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸ್ಕೇಟಿಂಗ್ನಲ್ಲೂ ಈ ಮಟ್ಟಕ್ಕೆ ಕಲಹಗಳು ನಡೆದಿರೋದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷ ಇದೇ ಅಂಕಿತ್, ರಾಘವೇಂದ್ರನಿಗೆ ಹಲ್ಲೆ ನಡೆಸಿದ್ದು ಅದರ ರಿವೇಂಜ್ನಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಳೆದ ವರ್ಷ ಹಲ್ಲೆ ನಡೆದಾಗ ರಾಜ್ಯ ಸ್ಕೇಟಿಂಗ್ ಅಸೋಶೀಯೇಷನ್ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಈ ಘಟನೆ ಮರುಕಳಿಸಲು ಕಾರಣ ಎಂಬ ಆರೋಪ ಕೇಳಿ ಬಂದಿದೆ.ಒಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಒರೆಗೆ ಹಚ್ಚಬೇಕಾದ ಸ್ಪರ್ಧೆಗಳು ಈ ರೀತಿ ಹೊಡೆದಾಡಿದ್ದು ಮಾತ್ರ ವಿಪರ್ಯಾಸವೇ ಸರಿ.