ಪೊಲೀಸ್ ಠಾಣೆ ಪಕ್ಕವೇ ನಡೆಯುತ್ತಿತ್ತು ಜೂಜಾಟ- ಸುದ್ದಿ ಪ್ರಸಾರವಾಗ್ತಿದ್ದಂತೆ ಪಿಎಸ್​ಐ ಸೇರಿ ಇಬ್ಬರು ಅಮಾನತ್ತು!

Chikmagalur: Peoples Gamble in Front Of Police Station.

ಪೊಲೀಸ್ ಠಾಣೆ ಅಕ್ಕಪಕ್ಕ ಜನರು ಓಡಾಡೋಕೆ ಭಯ ಪಡ್ತಾರೆ. ಆದರೇ ಇಲ್ಲಿ ಮಾತ್ರ ಪೊಲೀಸ್ ಠಾಣೆ ಪಕ್ಕದಲ್ಲೇ ಜನರು ಶಾಮಿಯಾನ್ ಹಾಕ್ಕೊಂದು ಜೂಜಾಟದಲ್ಲಿ ತೊಡಗಿದ್ದರು.

ಆದರೇ ಇದ್ಯಾಕೋ ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಕೊನೆಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಚಿಕ್ಕಮಗಳೂರು ಎಸ್​ಪಿ ಪಿಎಸ್​ಐ ಸಹಿತ ಇಬ್ಬರು ಪೊಲೀಸರನ್ನು ಅಮಾನತ್ತು ಪಡಿಸಿ ಆದೇಶ ಹೊರಡಿಸಿದ್ದಾರೆ.  ಮಲೆನಾಡಿನ ಪ್ರಸಿದ್ದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆಸಿರುವ ಕಳಸ ಪಟ್ಟಣದ ಕಳಶೇಶ್ವರ ಜಾತ್ರೆಯಲ್ಲಿ ಜೂಜಾಟ ಎಗ್ಗಿಲ್ಲದೇ ನಡೆದಿತ್ತು. ಪ್ರತಿನಿತ್ಯವೂ ಲಕ್ಷಾಂತರ ಮೌಲ್ಯದಲ್ಲಿ ದುಡ್ಡು ಕಟ್ಟಿ ಇಸ್ಪೀಟ್ ಆಡುತ್ತಿರುವ ದಂಧೆ ಸೋಷಿಯಲ್ ಮೀಡಿಯಾಗಳಲ್ಲಿ ಬೆಳಕಿಗೆ ಬಂದಿತ್ತು.

 

ಈ ಎಕ್ಸಕ್ಲೂಸಿವ್​ ಸುದ್ದಿಯನ್ನು ಬಿಟಿವಿನ್ಯೂಸ್​ ಕೂಡ ಪ್ರಸಾರ ಮಾಡಿತ್ತು.
ಇನ್ನು ಹೀಗೆ ಲಕ್ಷಾಂತರ ರೂಪಾಯಿ ಬಳಸಿ ಜೂಜಾಟ ನಡೆದಿರುವ ಸಂಗತಿ ಪೊಲೀಸರ ಗಮನಕ್ಕೆ ಬಂದಿದ್ದರೂ ಅವರು ಮೌನ ವಹಿಸಿದ್ದರು. ಹೀಗಾಗಿ ಈ ಅಂದರ್-ಬಾಹರ್​ ದಂಧೆಯಲ್ಲಿ ಪೊಲೀಸರಿಗೆ ಕೂಡ ಪಾಲಿದೆ ಎಂಬ ಆರೋಪವೂ ಕೇಳಿಬಂದಿತ್ತು. ಜನರು ಸೋಷಿಯಲ್ ಮೀಡಿಯಾಗಳಲ್ಲಿ ಪೊಲೀಸರ ವೈಫಲ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಎಸ್​ಪಿ ಅಣ್ಣಾಮಲೈ ಕಳಸ ಪಿಎಸ್​ಐ ರಘುನಾಥ,ಕಾನ್ಸಟೇಬಲ್​ ರಂಗನಾಥ್ ರನ್ನು ತಕ್ಷಣವೆ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಇಲಾಖಾ ತನಿಖೆಗೂ ಆದೇಶಿಸಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here