ಚಿಕ್ಕೋಡಿ ಗಯ್ಯಾಳಿಗಳ ಕತ್ತಿವರಸೆ!!

ಒಂದೇ ಪ್ರದೇಶದಲ್ಲಿ ಪ್ರತಿನಿತ್ಯ ಮೀನು ಮಾರಾಟ ಮಾಡುವ ಇಬ್ಬರು ಮಹಿಳೆಯರು ಜಾಗದ ವಿಚಾರಕ್ಕೆ ಪರಸ್ಪರ ಕತ್ತಿ ಹಿಡಿದು ಹೊಡೆದಾಡಿಕೊಂಡ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಈ ಮೀನು ಮಾರುವ ಮಹಿಳೆಯರ ಜಗಳವನ್ನು ಸ್ಥಳದಲ್ಲಿದ್ದವರೊಬ್ಬರು ವಿಡಿಯೋ ಮಾಡಿದ್ದು, ಚಿಕ್ಕೋಡಿ ಗಯ್ಯಾಳಿಗಳು ಹೆಸರಿನಲ್ಲಿ ಸಖತ್ ವೈರಲ್ ಆಗಿದೆ.


ಮೊದಲು ಕೈ-ಕೈ ಮಿಲಾಯಿಸಿದ ಮಹಿಳೆಯರು ನಿಧಾನಕ್ಕೆ ಕತ್ತಿ ಹಿಡಿದು ಜಗಳಕ್ಕೆ ನಿಂತರು.

ಇಬ್ಬರು ಮಹಿಳೆಯರು ಹೀಗೆ ಬಡಿದಾಡುತ್ತಿದ್ದರೇ ಸ್ಥಳದಲ್ಲಿ ನೂರಾರು ಜನರು ನಿಂತು ಮಜಾ ತೆಗೆದುಕೊಳ್ಳುತ್ತಿದ್ದರು. ಕೊನೆಯಲ್ಲಿ ಮತ್ತೊಬ್ಬ ಮೀನು ಮಾರುವ ಮಹಿಳೆ ಇಬ್ಬರ ಜಗಳ ಬಿಡಿಸಿ ಸಮಾಧಾನಿಸಿದ್ದಾಳೆ.