ಈತ ಒಬ್ಬ ಬಸ್ ಕಂಡಕ್ಟರ್ .. ಈತ ಲೂಟಿ ಮಾಡಿದ್ದು ಎಷ್ಟು ಗೊತ್ತಾ?

ಬೀದರ್ ಸಾರಿಗೆ ಸಂಸ್ಥೆ ಸಾಫ್ಟ್ ವೇರ್ ಗೇ ಕಳೆದ ನಾಲ್ಕು ವರ್ಷದಿಂದ ಕನ್ನ ಹಾಕಿದ ಸಿಬ್ಬಂದಿಯೊಬ್ಬ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಕೋಟ್ಯಾಂತರ ಹಣ ಲೂಟಿ ಮಾಡಿದ ಘಟನೆ ಬೀದರ್ ಡಿಫೋದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಇದರಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ಮೇಲಾಧಿಕಾರಿಗಳ ಸಹಕಾರ ವಿಲ್ಲದೆ ಇಷ್ಟೋಂದು ಭಾರಿ ಪ್ರಮಾಣದಲ್ಲಿ ಅದು ಕ್ಲರ್ಕ ಹುದ್ದೆಯಲ್ಲಿರುವ ಲೂಟಿ ಮಾಡಲು ಸಾಧ್ಯನಾ ಅನ್ನೋ ಪ್ರಶ್ನೆ ಎದುರಾಗಿದೆ.ಡಿಫೋದಲ್ಲಿ ಅಡಿಟ್ ಕ್ಲರ್ಕ{ಲೆಕ್ಕ ಪರಿಶೋಧಕ}ಕಾರ್ಯ ನಿರ್ವಹಿಸುತ್ತಿದ್ದ ಅಮರ್ ಎಂಬ ವ್ಯಕ್ತಿ ಸಾಪ್ಟವೇರ್ ಅಲ್ಲಿ ಸಮಸ್ಯೆ ಉಂಟು ಮಾಡಿ ಹಣಲೂಟಿ ಮಾಡಿದ್ದಾನೆ ಎನ್ನಲಾಗುತ್ತಿದೆ.

ಯಾವಾಗ ಈ ಬಗ್ಗೆ ಮಾಹಿತಿ ಸಿಕ್ಕಿದ್ದೆ ತಡ ಇಲಾಖೆ ರಾಯಚೂರು ಮತ್ತು ಬಿಜಾಪೂರ್ ಜಿಲ್ಲೆಯ ಅಧಿಕಾರಿಗಳ ತನಿಖೆ ಕೈಗೊಂಡಿದ್ದಾರೆ.ಆದ್ರೆ ಕಳೆದ 2014ರಿಂದ ಇಲ್ಲಿಯವರೆಗೆ ಲೂಟಿ ಮಾಡಿದ್ರು ಇಲಾಖೆಗೆ ಹೇಗೆ ಮಾಹಿತಿ ಸಿಕ್ಕಿಲ್ಲ ಅನ್ನೋದು ಮಾತ್ರ ಯಕ್ಷ ಪ್ರಶ್ನೆ. ಈ ಬಗ್ಗೆ ಪ್ರತಿಕ್ರಿಸಿರುವ ವಿಭಾಗಿಯ ನಿಯಂತ್ರಣಾಧಿಕಾರಿ ಕೊಟ್ರಪ್ಪಾ ಮೇಲ್ಮೋಟಕ್ಕೆ 59ಲಕ್ಷ ರೂ.ಅಕ್ರಮ ವಾಗಿದೆ..ಇನ್ನು ತನಿಖೆ ನಡೆಯುತ್ತಿದೆ ತನಿಖೆಯ ನಂತರವೇ ಎಷ್ಟು ಕೋಟಿ ಘೋಟಾಳ ವಾಗಿದೆ ಅನ್ನೋದು ಬೆಳಕಿಗೆ ಬರ ಬೇಕಿದೆ ಅಂತಾರೆ.