ನಡುರಸ್ತೆಯಲ್ಲೇ ಲಾಂಗ್​-ಮಚ್ಚು ಹಿಡಿದು ಕುಣಿದಾಡಿದ ಕಾರ್ಪೋರೇಟರ್​!!

Corporto's sword Dance for Eid Milad celebration.
Corporto's sword Dance for Eid Milad celebration.

ಬೆಂಗಳೂರಿನಲ್ಲಿ ಕಾರ್ಪೋರೇಟರ್ರೊಬ್ಬರು ಆಚರಿಸಿದ ಈದ್ ಮಿಲಾದ್ ಹಬ್ಬ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಕಾರ್ಪೋರೇಟರ್​​ ಮಾರಕಾಸ್ತ್ರಗಳ ಜೊತೆ ಕುಣಿದ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.


ಬೆಂಗಳೂರಿನ ಜೆಜೆನಗರದ ಪಾದರಾಯನ ಪಾಳ್ಯದಲ್ಲಿ ಶನಿವಾರ ಘಟನೆ ನಡೆದಿದ್ದು, ಜೆಜೆನಗರ ಪಾದರಾಯಪಾಳ್ಯ ಕಾರ್ಪೋರೇಟರ್​ ಇಮ್ರಾನ್ ಪಾಷಾ ಹಬ್ಬದ ಬಳಿಕ ಮೆರವಣಿಗೆ ವೇಳೆ ಲಾಂಗ್​-ಮಚ್ಚು ಸೇರಿದಂತೆ ವಿವಿಧ ಆಯುಧಗಳ ಜೊತೆ ಕುಣಿದಾಡಿದ್ದಾರೆ. ಅವರಿಗೆ ಬೆಂಬಲಿಗರು ಕೂಡ ಲಾಂಗ್​ಗಳನ್ನು ಪ್ರದರ್ಶಿಸಿ ಕೂಗಾಡಿ, ಕಿರುಚಾಡುವ ಮೂಲಕ ಸಾಥ್ ನೀಡಿದ್ದಾರೆ.

ಇದೀಗ ಈ ವಿಡಿಯೋ ವಿವಾದಕ್ಕೆ ಕಾರಣವಾಗಿದ್ದು, ಜನಪ್ರತಿನಿಧಿಯೊಬ್ಬರು ಹೀಗೆ ಸಾರ್ವಜನಿಕ ಸ್ಥಳದಲ್ಲಿ ಮುಕ್ತವಾಗಿ ಲಾಂಗ್​-ಮಚ್ಚುಗಳ ಪ್ರದರ್ಶನ ಮಾಡೋದು ಎಷ್ಟು ಸರಿ ? ಎಂಬ ಚರ್ಚೆ ಹುಟ್ಟುಹಾಕಿದೆ. ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿಭದ್ರತೆ ಒದಗಿಸಲಾಗಿದೆ. ಹೀಗಿದ್ದಾಗಲೂ ಕಾರ್ಪೋರೇಟರ್​ ವರ್ತನೆ ಇದೀಗ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

 

ಇನ್ನು ಈ ಬಗ್ಗೆ ಪೊಲೀಸ್ ಇಲಾಖೆ ಕೂಡ ಪ್ರತಿಕ್ರಿಯೆ ನೀಡಿದ್ದು, ಜೆಜೆನಗರದ ಪಾದರಾಯನಪಾಳ್ಯದಲ್ಲಿ ಶನಿವಾರ ನಡೆದ ಘಟನೆ ನಮ್ಮ ಗಮನದಲ್ಲಿದೆ. ಆಯುಧ ಪ್ರದರ್ಶನ ಮಾಡಬಾರದೆಂದು ಸೂಚನೆ ನೀಡಲಾಗಿತ್ತು. ಆದರೂ ಪ್ರದರ್ಶನವಾಗಿದೆ ಎಂಬ ವಿಡಿಯೋ ಲಭ್ಯವಾಗಿದೆ. ಹೀಗಾಗಿ ಆಯುಧಗಳ ಬಗ್ಗೆ ತನಿಖೆ ನಡೆದಿದೆ. ಒಂದೊಮ್ಮೆ ಪ್ರದರ್ಶನಕ್ಕೆ ಬಳಸಿರೋದು ಅಸಲಿ ಆಯುಧ ಎಂಬುದು ಸಾಬೀತಾದಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಜೆಜೆನಗರ ಪೊಲೀಸ್ರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ಈ ವಿಡಿಯೋ ಸಾಕಷ್ಟು ಸಂಚಲನ ಮೂಡಿಸಿರೋದು ಮಾತ್ರ ಸತ್ಯ.