ಕಳ್ಳಭಟ್ಟಿ ದಂಧೆಕೋರನಿಗೆ ಗಡಿಪಾರು ಶಿಕ್ಷೆ….. ದಂಪತಿಗಳ ಬಂಧನ… ನಿಟ್ಟುಸಿರು ಬಿಟ್ಟ ಜನತೆ….

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇನ್ನು ಜೀವಂತವಾಗಿದ್ದ ಕಳ್ಳಭಟ್ಟಿ ಕರಾಳ ದಂಧೆಯನ್ನು ಬಿಟಿವಿ ಬಯಲು ಮಾಡಿತ್ತು. ಹುಬ್ಬಳ್ಳಿಯ ಸಾಯಿ ನಗರದಲ್ಲಿ “”ಗಂಟು”” ಎನ್ನುವ ಹೆಸರಿನಿಂದ ಕಳ್ಳಭಟ್ಟಿ ಮಾರಾಟ ಮಾಡಲಾಗುತ್ತಿತ್ತು. 10 ರಿಂದ 40‌ ರೂಪಾಯಿವರಿಗೆ ಕಳ್ಳಭಟ್ಟಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದಿಂದ ಬರುವ ಜನರು ಈ ಗಂಟು‌ ಸೇವನೆ ಮಾಡಿ ಸಾಕಷ್ಟು ಜನ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದಾರಂತೆ. ಇಷ್ಟೊಂದು ರಾಜಾರೋಷವಾಗಿ ದಂಧೆ ನಡೆಯುತ್ತಿದ್ರು ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲಾ. ಯಾವಾಗ ಬಿಟಿವಿ ಭೇಟೆ ಎನ್ನುವ ಕಾರ್ಯಕ್ರಮದಲ್ಲಿ ವಿಸ್ಕೃತ ವರದಿ ಪ್ರಸಾರ ಮಾಡಿದ ನಂತ್ರ ಎಚ್ಚತ್ತುಕೊಂಡು ಪೊಲೀಸ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಕಳ್ಳಭಟ್ಟಿ ಮಾರಾಟ ಮಾಡ್ತಾಯಿದ್ದ ದಂಪತಿಗಳನ್ನು ಬಂಧಿಸಿದ್ದಾರೆ.

ad 

ಸಾಯಿ ನಗರ ನಿವಾಸಿಗಳಾದ ನಾಗರಾಜ್ ಚವ್ಹಾಣ ಹಾಗೂ ಆರತಿ‌ ಚವ್ಹಾಣ ಎನ್ನುವ ದಂಪತಿಗಳನ್ನು ಬಂಧಿಸಿ ಅವರಿಂದ 23 ಲಿಟಲ್ ಮದ್ಯಸಾರ ಹಾಗೂ‌ 8 ಸಾವಿರ ನಗರದು ವಶಪಡಿಸಿಕೊಳ್ಳಲಾಗಿದೆ. ಬಿಟಿವಿಯ ಸುದ್ದಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು‌ ಹುಬ್ಬಳ್ಳಿ- ಧಾರವಾಡ ಪೊಲೀಸ ಕಮೀಷನರ್ ಎಮ್ ಎನ್ ನಾಗರಾಜ್ ಹೇಳಿದ್ದಾರೆ ಹಾಗೇ ಪ್ರಮುಖ‌ ಆರೋಪಿ ನಾಗರಾಜ್ ಚವ್ಹಾಣ ಈ ಹಿಂದೆಯೂ ಕೂಡಾ ಕಳ್ಳಭಟ್ಟಿ ದಂಧೆಯಲ್ಲಿ ಭಾಗಿರೋ ಕುರಿತು ಪ್ರಕರಣ ದಾಖಲಾಗಿದ್ದು, ಹಾಗಾಗಿ ಆತನಿಗೆ ನೋಟಿಸ್ ನೀಡಿ ಗಡಿಪಾರು ಮಾಡೋದಾಗಿ ಆದೇಶ ಮಾಡಿರೋದಾಗಿ ಹೇಳಿದ್ದಾರೆ..

 

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ.