ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಮತ್ತೊಂದು ಮಹತ್ತರ ಕಾರ್ಯ. ಅದೇನಂತೀರಾ?

ನಾಡಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ವಿದ್ಯಾಕಾಶಿಯಲ್ಲಿರುವ ವಿಶ್ವವಿದ್ಯಾಲಯ ಮತ್ತೊಂದು ಸಮಾಜಮುಖಿ ಕಾರ್ಯಕ್ಕೆ ಒಂದಾಗಿದೆ. ಪದವಿ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಮಂಗಳಮುಖಿಯರಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಈ ಕುರಿತ ಒಂದು ಕಂಪ್ಲಿಟ್ ಸ್ಟೋರಿ ಇಲ್ಲಿದೆ ನೋಡಿ…

ad


ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸಮಾಜ ಮುಖಿ ಕಾರ್ಯಕ್ಕೆ ಮುಂದಾಗಿದೆ. ಮಂಗಳ ಮುಖಿಯರಿಗೆ ಉಚಿತ ಶಿಕ್ಷಣ ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ. ಪದವಿ ಹಂತದಿಂದ ಸ್ನಾತಕೋತ್ತರ ಹಂತದವರೆಗೂ ಮಂಗಳ ಮುಖಿಯರಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಕೆ.ಎಂ. ಹೊಸಮನಿ ಬಿಟಿವಿಗೆ ಮಾಹಿತಿ ನೀಡಿದ್ದಾರೆ…

 

ಸಮಾಜದಲ್ಲಿ ಅವಹೇಳನ ಮತ್ತು ನಿರ್ಲಕ್ಷಕ್ಕೊಳಗಾದ ಮಂಗಳಮುಖಿಯರು ಇನ್ಮೇಲೆ ಉನ್ನತ ಅಭ್ಯಾಸ ಮಾಡಲು ಕರ್ನಾಟಕ ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದ ಈ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ನಾಡಿನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಂಗಳಮುಖಿಯರಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿರುವ ನಿರ್ಧಾರಕ್ಕೆ ಸರ್ಕಾರವೂ ಸಹ ಬೆಂಬಲಿಸಬೇಕಿದೆ…

ಇನ್ಮೇಲೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಂತೆ ಮಂಗಳಮುಖಿಯರು ಎಲ್ಲರೊಡನೆ ಕುಳಿತು ಅಭ್ಯಾಸ ಮಾಡುಬಹುದಾಗಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ಮತ್ತು ನಿರ್ಲಕ್ಷಕ್ಕೊಳಗಾದ ಈ ವರ್ಗದವರಿಗೆ ಶಿಕ್ಷಣ ನೀಡಲು ಮುಂದಾಗಿರುವದು ಶ್ಲಾಘನೀಯ…

ವರದಿ: ಮೆಹಬೂಬ ಮುನವಳ್ಳಿ, ಬಿಟಿವಿ ನ್ಯೂಸ್ ಧಾರವಾಡ…