ಧರ್ಮ ಮೀರಿದ ಪ್ರೇಮಿಗಳಿಗೆ ಹೆತ್ತವರೇ ವಿಲನ್!!

ಪ್ರೀತಿಗೆ ಜಾತಿ-ಮತದ ಹಂಗಿಲ್ಲ ಅಂತಾರೆ. ಇಲ್ಲೊಂದು ಯುವಪ್ರೇಮಿಗಳು ಅದನ್ನು ನಿಜಮಾಡಿದ್ದಾರೆ. ಮತ-ಧರ್ಮದ ಹಂಗು ತೊರೆದು ಪ್ರೀತಿಸಿ ವಿವಾಹವಾಗಿರುವ ಜೋಡಿ ಪಾಲಿಗೆ ಜಾತಿಯೇ ವಿಲನ್​ ಆಗಿದ್ದು, ಬದುಕಲು ಅವಕಾಶ ಕಲ್ಪಿಸುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ.


ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ವಿನಾಯಕ್ ಅದೇ ತಾಲೂಕಿನ ಬಾನುವಳ್ಳಿ ಗ್ರಾಮದ ರುಹಿನಾ ಕೌಸರ್​ರನ್ನು ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಎರಡು ಕಡೆಯಲ್ಲೂ ಮದುವೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನವೆಂಬರ್ 15 ರಂದು ವಿನಾಯಕ್ ರುಹಿನಾ ಕೌಸರ್ ಅವರನ್ನು ಗಣೇಶ ದೇವಾಲಯದಲ್ಲಿ ವಿವಾಹವಾಗಿದ್ದರು.

ಆದರೇ ಇವರ ವಿವಾಹಕ್ಕೆ ರುಹಿನಾ ಕೌಸರ್ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರೇಮಿಗಳಿಗೆ ಜೀವಬೆದರಿಕೆ ಹಾಕಲಾಗಿತ್ತು. ಹೀಗಾಗಿ ಮದುವೆಯಾಗಿ 5 ದಿನಗಳಲ್ಲೇ ಪ್ರಾಣಬೆದರಿಕೆ ಎದುರಿಸುತ್ತಿರುವ ಅಂತರಧರ್ಮಿಯ ಜೋಡಿ ಇದೀಗ ರಕ್ಷಣೆ ಕೋರಿ ಎಸ್​ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ನಮ್ಮ ಪ್ರೀತಿಗೆ ಹೆತ್ತವರೇ ಅಡ್ಡಿಯಾಗಿದ್ದು, ನಮಗೆ ಬದುಕಲು ಅವಕಾಶ ನೀಡಬೇಕೆಂದು ವಿನಾಯಕ್ ರುಹಿನಾ ಮನವಿ ಮಾಡಿದ್ದಾರೆ.