ನಾಯಿ ಜಗಳದಲ್ಲಿ ಗರ್ಭಿಣಿ ಮೇಲೆ ಹಲ್ಲೆ !! ಗರ್ಭದಲ್ಲೇ ಶಿಶು ಸಾವು !!

Davangere: Pregnant woman loss her 7month unborn Baby for quarrel issue.
Davangere: Pregnant woman loss her 7month unborn Baby for quarrel issue.

ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ನಡೆಯುವ ಗಲಾಟೆ ಭಾರೀ ಪಶ್ಚಾತಾಪ ಪಡುವಂತಾಗುತ್ತದೆ. ನಾಯಿಗಾಗಿ ನಡೆಯುತ್ತಿದ್ದ ಜಗಳ ಜಗತ್ತೇ ಕಂಡರಿಯದ ಮಗುವಿನ ಪ್ರಾಣವನ್ನು ಕಿತ್ತುಕೊಂಡಿದೆ.

ನಾಯಿ ವಿಚಾರಕ್ಕೆ ಜಗಳ ಆಡ್ತಿದ್ದವರನ್ನ ಬಿಡಿಸಲು ಹೋದ ಗರ್ಭಿಣಿ ಮೇಲೆ ಕಿರಾತಕರು ಹಲ್ಲೆ ನಡೆಸಿದ್ದಾರೆ. ಪರಿಣಾಮ ಗರ್ಭದಲ್ಲೇ 7 ತಿಂಗಳ ಶಿಶು ಸಾವನ್ನಪ್ಪಿದೆ.

ದಾವಣಗೆರೆ ತಾಲ್ಲೂಕಿನ ಪಾಮೇನಹಳ್ಳಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕವಿತಾ ಹಲ್ಲೆಗೊಳಗಾಗಿ ಮಗು ಕಳೆದುಕೊಂಡ ದುರ್ದೈವಿ. ನಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕವಿತಾ ಅಕ್ಕ  ನೇತ್ರಾವತಿ ಹಾಗೂ ಆಕೆಯ ಗಂಡನ ಮೇಲೆ ಆ  ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ವಿಷಯ ಪ್ರಶ್ನಿಸಿದ್ದಕ್ಕೆ ಪಾಪಿಗಳು ಗರ್ಭಿಣಿ ಅನ್ನೋದನ್ನ ಮರೆತು ಕವಿತಾ ಮೇಲೆ  ಹಲ್ಲೆ ನಡೆಸಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.