ಇದೊಂದು ನರಕ ಸದೃಶ ಹಾಸ್ಟೆಲ್. ಇಲ್ಲಿ ಊಟದಲ್ಲಿ ತರಕಾರಿಯ ಬದಲು ಏನೇನು ಸಿಗುತ್ತಂತೆ ಗೊತ್ತಾ?

ಸರ್ಕಾರ ಸೌಲಭ್ಯ ಕೊಟ್ರೂ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಸೌಕರ್ಯ……ಸರ್ಕಾರ ಕೊಟ್ರೂ ವಿದ್ಯಾರ್ಥಿಗಳಿಗೆ ನೀಡದ ವಾರ್ಡನ್……ಸಂಬಳಕ್ಕೆ ಹಾಜರ್, ಕೆಲಸಕ್ಕೆ ಚಕ್ಕರ್ ಹೊಡೆಯೋ ನಿರೀಕ್ಷಕ….ಇದು ಸಮಾಜ ಕಲ್ಯಾಣ ಇಲಾಖೆಯ ನರಕ ದರ್ಶನ…..ಬಾಗಿಲುಗಳೇ ಇಲ್ಲದ ಶೌಚಾಲಯ..

ad


ಸರ್ಕಾರ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಅಂತ ಕೋಟ್ಯಾಂತರ ಅನುದಾನ ನೀಡ್ತಾಯಿದೆ. ಆದ್ರೆ ಇಲ್ಲೊಂದು ಹಾಸ್ಟೆಲ್ ವಿದ್ಯಾರ್ಥಿಗಳ ಪಾಲಿಗೆ ನರಕವಾಗಿದೆ. ಅಧಿಕಾರಿಗಳು, ವಾರ್ಡನ್ ಗಳ ಹಣದ ದಾಹಕ್ಕೆ ಸರ್ಕಾರದ ಯೋಜನೆ ವಿದ್ಯಾರ್ಥಿಗಳಿಗೆ ಮರೀಚಿಕೆಯಾಗಿದೆ. ಹೌದು ಇದು ಗದಗ ಜಿಲ್ಲೆಯ ರೋಣ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ದುಸ್ಥಿತಿ. ಇಲ್ಲಿ ಸುಮಾರು ೭೦ ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದ್ರೆ ಅವರಿಗೆ ಯಾವುದೇ ಬಗೆಯ ಮೂಲ ಸೌಲಭ್ಯಗಳು ಮಾತ್ರ ಇಲ್ಲ. ಇಲ್ಲಿ ಕೊಡೋ ಊಟದಲ್ಲಿ ತರಕಾರಿಗಿಂತ ಹುಳುಗಳೇ ಹೆಚ್ಚಾಗಿರ್ತವಂತೆ. ಇನ್ನು ಹಾಸ್ಟೆಲ್ ನ ಎಲ್ಲಾ ಕೊಠಡಿಗಳ ಕಿಟಕಿಗಳ ಗಾಜುಗಳು ಒಡೆದೋಗಿವೆ.

  

ಮಳೆಗಾಲದಲ್ಲಿ ಈ ಒಡೆದ ಕಿಟಕಿಗಳಿಂದ ಹಾವು ಚೇಳುಗಳಂತ ಹುಳ ಹುಪ್ಪಟೆಗಳು ಕೊಠಡಿಗಳೊಳಗೇ ನುಗ್ಗುತ್ವಂತೆ. ಅಲ್ದೆ ಬೆಳಕಿಗಾಗಿ ಹಾಕಿರೋ ಬಲ್ಬ್ ಗಳೂ ಸಹ ಒಡೆದೋಗಿದ್ದು ಕತ್ತಲೆಯಲ್ಲೇ ಇರುವಂತಾಗಿದೆ. ಇಲ್ಲಿನ ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ. ಕೆಲವಕ್ಕೆ ಇದ್ರೂ, ಆ ಬಾಗಿಲುಗಳಿಗೆ ಚಿಲಕವೇ ಇಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವಿದ್ಯಾರ್ಥಿಗಳ‌ ಕುಂದುಕೊರತೆ ನಿವಾರಿಸಬೇಕಾಗಿದೆ. ಆದ್ರೆ ಅದನ್ನೂ ಸಹ ಮಾಡಿಲ್ಲ.

ಇನ್ನು ಈ ಹಾಸ್ಟೆಲ್ ವಾರ್ಡನ್ ನದಾಫ್, ತಾವು ಇಲ್ಲಿಗೆ ಬಾರದೆ ದೊಡ್ಡಮನಿ ಎಂಬಾತನನ್ನು ಸಹಾಯಕನಾಗಿ ನೇಮಿಸಿ ಅವರ ಮೇಲೆಯೇ ಸಂಪೂರ್ಣ ಜವಾಬ್ದಾರಿಯನ್ನು ನೀಡಿದ್ದಾರೆ. ೧೫ ದಿನಕ್ಕೋ ತಿಂಗಳಿಗೋ ಒಮ್ಮೆ ಬರೋ ವಾರ್ಡನ್ ನದಾಫ್ ಅವರಿಗೆ ಇಲ್ಲಿನ ವಿದ್ಯಾರ್ಥಿಗಳು ಅವ್ಯವಸ್ಥೆಯನ್ನು ಸರಿಪಡಿಸಿ ಅಂತ ಹೇಳಿದ್ರೆ, ಇರೋದ್ರಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳಿ ಅಂತಾರಂತೆ. ಇಲ್ಲಿರೋದನ್ನು ನೆನೆಸಿಕೊಂಡ್ರೆ, ನರಕದಲ್ಲಿದ್ದೇವಾ ಅನ್ನೋ ಅನುಮಾನ ನಮ್ಮನ್ನು ಕಾಡ್ತಿದೆ ಅಂತಾರೆ ವಿದ್ಯಾರ್ಥಿಗಳು. ಇನ್ನು ಈ ಬಗ್ಗೆ ‌ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೇಳೋದು ಹೀಗೆ.