ನಡೆದಾಡುವ ದೇವರ ಆರೋಗ್ಯ ಸ್ಥಿರ- ಮಠಕ್ಕೆ ಮರಳಿದ ಸ್ವಾಮೀಜಿ- 10 ದಿನಗಳ ವಿಶ್ರಾಂತಿಗೆ ವೈದ್ಯರ ಸೂಚನೆ!!

Discharged: Siddaganga Sree's Return to Tumkur.

ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಬಿಜಿಎಸ್​ ಗ್ಲೋಬಲ್​ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಗಂಗಾಶ್ರೀಗಳು ಚೇತರಿಸಿಕೊಂಡಿದ್ದಾರೆ.

ad


 

ಇಂದು ಮಧ್ಯಾಹ್ನ ಶ್ರೀಗಳನ್ನು ಬಿಜಿಎಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಶ್ರೀಗಳು ಈಗಾಗಲೇ ತುಮಕೂರು ಮಠ ತಲುಪಿದ್ದು, ಅವರನ್ನು ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಗಿದೆ. ಮಠದಲ್ಲೂ ಇನ್ನು ಒಂದು ವಾರಗಳ ಕಾಲ ಶ್ರೀಗಳಿಗೆ ಟ್ರಿಟ್ಮೆಂಟ್​ ಮುಂದುವರಿಯಲಿದೆ.
ಶ್ರೀಗಳ ಆರೋಗ್ಯ ಕುರಿತು ಬಿಜಿಎಸ್​ ವೈದ್ಯಾಧಿಕಾರಿ ಡಾ.ರವೀಂದ್ರ ಮಾತನಾಡಿದ್ದು, ಶ್ರೀಗಳಿಗೆ ನ್ಯುಮೋನಿಯಾ ಮತ್ತು ಸೋಂಕು ಇದೆ. ರಕ್ತದಲ್ಲಿ ಬ್ಯಾಕ್ಟಿರಿಯಾ ಇರೋದು ಗೊತ್ತಾಗಿದೆ. ಅಲ್ಟ್ರಾಸೌಂಡ್​ ಮತ್ತು ಸಿಟಿ ಸ್ಕ್ಯಾನ್​ ಮಾಡಿದ್ದೇವೆ. ಸ್ವಾಮೀಜಿಗಳು ಹಳೆಯ ಮಠಕ್ಕೆ ತೆರಳಲು ಇಚ್ಚಿಸುತ್ತಿರುವುದರಿಂದ ಡಿಸ್ಚಾರ್ಜ್ ಮಾಡುತ್ತಿದ್ದೇವೆ ಎಂದರು.

ಡಿಸ್ಚಾರ್ಜ್ ಬಳಿಕ ಸ್ವಾಮೀಜಿಯನ್ನು ಝೀರೋ ಟ್ರಾಫಿಕ್​ನಲ್ಲಿ ಬೆಂಜ್​ ಕಾರಿನಲ್ಲಿ ತುಮಕೂರಿನ ಮಠಕ್ಕೆ ಕರೆದೊಯ್ಯಲಾಯಿತು. ಶ್ರೀ ಗಳನ್ನು ಜಿಲ್ಲಾಡಳಿತದ ವತಿಯಿಂದ ಜಿಪಂ‌ ಸಿಇಒ ಅನೀಸ್ ಕಣ್ಮಣಿ ಜಾಯ್,ಶಾಸಕ ಸುರೇಶ್ ಗೌಡ , ಎಡಿಸಿ ಅನಿತಾ ಹಾಗೂ ತುಮಕೂರು ಎಸಿ ತಬ್ ಸಮ್ ಜಹೇರಾ ಮಠಕ್ಕೆ ಆಗಮಿಸಿ ಶ್ರೀಗಳನ್ನು ಸ್ವಾಗತಿಸಿ ಆಶೀರ್ವಾದ ಪಡೆದರು. ಇನ್ನು ಶ್ರೀಗಳಿಗೆ 10 ದಿನಗಳ ಕಾಲ ಆಂಟಿಬಯಾಟಿಕ್​ ನೀಡಲಾಗುತ್ತಿದ್ದು, ಸಂಪೂರ್ಣ ವಿಶ್ರಾಂತಿಗೆ ಸೂಚಿಸಲಾಗಿದೆ.
ಇನ್ನು ಶ್ರೀಗಳು ಬಿಜಿಎಸ್​ ಆಸ್ಪತ್ರೆಯಲ್ಲಿದ್ದಾಗ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಕಾಂಗ್ರೆಸ್​ ಮುಖಂಡ ಜಾಫರ್ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ನಿರ್ಮಲಾನಂದ ಶ್ರೀಗಳು ಶ್ರೀಗಳಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿದೆ.

 

 

 

 

ಶ್ರೀಗಳ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆಯಾಗಿದೆ. ವೈದ್ಯರಿಗೆ ಇನ್ನು ನಾಲ್ಕು ದಿನ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡುವ ಅಭಿಲಾಷೆಯಿದೆ. ಆದ್ರೆ ಶ್ರೀಗಳು ಮಠಕ್ಕೆ ತೆರಳಬೇಕೆನ್ನುತ್ತಿದ್ದಾರೆ. ಹೀಗಾಗಿ ಎರಡು ಗಂಟೆಯಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದರು.  ಒಟ್ಟಿನಲ್ಲಿ ನಾಡಿನಾದ್ಯಂತ ಆತಂಕಕ್ಕೆ ಕಾರಣವಾಗಿದ್ದ ಸಿದ್ಧಗಂಗಾಶ್ರೀಗಳ ಅನಾರೋಗ್ಯ ವಿಚಾರ ಸುಖಾಂತ್ಯಗೊಂಡಿದ್ದು, ಸಿದ್ಧಗಂಗಾಶ್ರೀಗಳು ತುಮಕೂರು ಮಠಕ್ಕೆ ತೆರಳುತ್ತಿದ್ದಂತೆ ವಿದ್ಯಾರ್ಥಿಗಳು ಹರ್ಷೋದ್ಘಾರ ಮಾಡಿ ಸ್ವಾಮೀಜಿ ಸ್ವಾಗತಿಸಿ ಪ್ರಾರ್ಥನೆ ಸಲ್ಲಿಸಿದರು. ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕೆಲವೇ ಹೊತ್ತಲ್ಲಿ ಶ್ರೀಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್
ಡಿಸ್ಚಾರ್ಜ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಮಠದ ಸಿಬ್ಬಂದಿಗಳು.

 

ಆಸ್ಪತ್ರೆಯಿಂದ ನೇರವಾಗಿ ಮಠಕ್ಕೆ ತೆರಳಲಿರುವ ಶ್ರೀಗಳು ಆಸ್ಪತ್ರೆಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಗಮನ ಶ್ರೀಗಳ ಆರೋಗ್ಯ ವಿಚಾರಣೆಗೆ ಆಗಮಿಸಿದ ನಿರ್ಮಲಾನಂದ ಸ್ವಾಮೀಜಿ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆ ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ಹೀಗಾಗಿ ಇನ್ನು ಎರಡು ಗಂಟೆಯಲ್ಲಿ ಶ್ರೀಗಳು ಡಿಸ್ಚಾರ್ಜ್ ಆಗಲಿದ್ದಾರೆ ಸಿದ್ದಗಂಗಾ ಶ್ರೀಗಳಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಿನ್ನಲೆ ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಫರ್ ಷರೀಫ್ ಶ್ರೀಗಳ ಆರೋಗ್ಯ ವಿಚಾರಿಸಲಿರುವ ಷರೀಫ್ ಶ್ರೀಗಳ ಆರೋಗ್ಯ ವಿಚಾರಿಸಿದ ಜಾಫರ್ ಷರೀಫ್ ಜಾಫರ್ ಷರೀಫ್ ಹೇಳಿಕೆ ಸಿದ್ದಗಂಗಾ ಶ್ರೀಗಳು ಚೇತರಿಸಿಕೊಂಡಿದ್ದಾರೆ ನಾನು ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಆದ್ರೆ ಶ್ರೀಗಳು ನನ್ನ ಆರೋಗ್ಯವನ್ನೇ ವಿಚಾರಿಸಿದ್ರು ಮನುಕುಲಕ್ಕೆ ಇಂತಹ ಆದರ್ಶವುಳ್ಳ ವ್ಯಕ್ತಿ ಸಿಗುವುದು ಕಷ್ಟ ಅವರು ಚಿರಕಾಲ ಬಾಳಲು ಎಂದು ಆಶಿಸುತ್ತೇನೆ ಶ್ರೀಗಳ ಡಿಸ್ಚಾರ್ಜ್ ಗೆ ಸಿದ್ಧತೆ.

 

ಶ್ರೀಗಳು ಡಿಸ್ಚಾರ್ಜ್ ಬೆಂಜ್ ಕಾರಿನಲ್ಲಿ ಆಸ್ಪತ್ರೆಯಿಂದ ತುಮಕೂರಿನ ಮಠಕ್ಕೆ ಪಯಣ ವಯೋಸಹಜ ,ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ಆಸ್ಪತ್ರೆಯಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿದ ಶ್ರೀಗಳು  ಪೊಲೀಸ್ ಬಿಗಿ ಭದ್ರತೆ ಯಲ್ಲಿ ತೆರಳಿದ ಶಿವಕುಮಾರ್ ಸ್ವಾಮೀಜಿ ಶ್ರೀಗಳು ತೆರಳಲು ಜಿರೋ ಟ್ರಾಫಿಕ್ ವ್ಯವಸ್ಥೆ ಇನ್ನು ಮಠದಲ್ಲೇ ಮುಂದುವರೆಯಲಿರುವ ಚಿಕಿತ್ಸೆ ಶ್ರೀಗಳಿಗೆ ಸೋಂಕು ಹಿನ್ನಲೆ ಮುಂದುವರೆಯಲಿರುವ ಆ್ಯಂಟಿಬಯೋಟಿಕ್ ಚಿಕಿತ್ಸೆ ಹತ್ತು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿರುವ ವೈದ್ಯರು ಸಿದ್ದಗಂಗಾ‌ಮಠಕ್ಕೆ ಆಗಮಿಸಿದ ಶ್ರೀಗಳು. ಶ್ರೀಗಳ ಬೆನ್ಜ್ ಕಾರಿನಲ್ಲಿ ಆಗಮನ. ಜಿರೋ ಟ್ರಾಫಿಕ್ ಮೂಲಕ ಆಗಮಿಸಿದ ಶ್ರೀಗಳು. ಶ್ರೀಗಳ ಜೊತೆಗೆ ಬಿಜಿಎಸ್ ವೈದ್ಯರ ತಂಡ ಆಗಮನ.