ಚಿಕಿತ್ಸೆಗೆ ಬಂದ ಮಹಿಳೆಯ ಜೊತೆ ವೈದ್ಯನ ಅಸಭ್ಯ ವರ್ತನೆ..

ಚಿಕಿತ್ಸೆಗೆ ಬಂದ ಮಹಿಳಾ ರೋಗಿ ಜೊತೆ ಬೆಂಗಳೂರಿನಲ್ಲಿ ವೈದ್ಯನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾನಗರದ ಶಿವ ಕ್ಲಿನಿಕ್ ವೈದ್ಯ ಬಿ. ಶಿವರಾಮ್ ಮೇಲೆ ಅರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಜ್ವರ ಅಂತ 25 ವರ್ಷದ ಮಹಿಳೆ ಶಿವ ಕ್ಲಿನಿಕ್​ಗೆ ಹೋಗಿದ್ದರು. ಈ ವೇಳೆ ವೈದ್ಯ ಶಿವರಾಮ್​​​ ಅಸಭ್ಯವಾಗಿ ವರ್ತಿಸಿದ್ದಾರೆ ಅಂತ ಆರೋಪಿಸಲಾಗಿದೆ. ಇದ್ರಿಂದ ಮಹಿಳೆ ಕಿರುಚಾಡಿದ್ದು ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ವೈದ್ಯರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅರೋಪಿ ವೈದ್ಯ ಶಿವರಾಮ್​​ರನ್ನು ಬಂಧಿಸಲಾಗಿದೆ.

ಸ್ಥಳೀಯವಾಗಿ ತುಂಬಾ ಹೆಸರು ಮಾಡಿದ್ದ ಶಿವರಾಮ್​​​ ಕಡಿಮೆ ದರದಲ್ಲಿ ಚಿಕಿತ್ಸೆ ನೀಡ್ತಿದ್ದರು. ಹೀಗಾಗಿ ಹೆಚ್ಚು ಸಂಖ್ಯೆಯಲ್ಲಿ ಜನರು ಇವ್ರ ಬಳಿಗೆ ಹೋಗ್ತಿದ್ದರು. ಬ್ಯಾಡರಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ವೈದ್ಯರು, ನಂತ್ರ ಸ್ಥಳೀಯರ ಒತ್ತಾಯ ಮೇರೆಗೆ ಕ್ಲಿನಿಕ್ ನಡೆಸುತ್ತಿದ್ದಾರೆ.