ಕುಡಿಯುವ ನೀರಿಗಾಗಿ ತಿಪಟೂರು ರೈತರ ಪಾದಯಾತ್ರೆ- ಜಮೀನು ಕೊಟ್ಟರು ಸಿಗದ ನೀರು!!

ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿಗಾಗಿ ಸರ್ಕಾರ ಎತ್ತಿನಹೊಳೆ ಕಾಮಗಾರಿ ಆರಂಭಿಸಿದೆ. ಈ ಕಾಮಗಾರಿಗಾಗಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಸಾವಿರಾರು ರೈತರ ಜಮೀನನ್ನು ವಶಪಡಿಸಿಕೊಂಡಿದೆ. ಈಗಾಗಲೇ ಕಾಮಗಾರಿಗೂ ಆರಂಭವಾಗಿದೆ. ಆದರೇ ಜಮೀನು ಕೊಟ್ಟವರಿಗೆ ನೀರು ಕೊಡದ ಯೋಜನೆ ವಿರುದ್ಧ ರೈತರು ಹೋರಾಟ ಆರಂಭಿಸಿದ್ದಾರೆ.

adತಿಪಟೂರಿನ ಜನರ ಜಮೀನನ್ನು ವಶಪಡಿಸಿಕೊಂಡಿರುವ ಸರ್ಕಾರ ಆ ಭಾಗಕ್ಕೆ ನೀರುಣಿಸದೇ ಬೇರೆ ಜಿಲ್ಲೆಗೆ ನೀರು ಪೊರೈಸುವ ಯೋಜನೆ ರೂಪಿಸಿದೆ. ನಮ್ಮ ಭೂಮಿ ಪಡೆದು ನಮಗೆ ನೀರು ನೀಡದ ಸರ್ಕಾರದ ಯೋಜನೆ ವಿರೋಧಿಸಿರುವ ರೈತರು ಕೆ.ಟಿ. ಶಾಂತಕುಮಾರ್ ನೇತೃತ್ವದಲ್ಲಿ ಸುಮಾರು 15 ಕಿಮಿ ದೂರ ಸಾವಿರಾರು ರೈತರು ಪಾದಯಾತ್ರೆ ಮಾಡಿ, ಏಸಿ ಗೆ ಮನವಿ ನೀಡಿದರು.


ನಮ್ಮ ಭಾಗದಲ್ಲೂ ಎಲ್ಲ ಕಡೆ ಚೆಕ್ ಡ್ಯಾಂ ಮಾಡಿ ಅದಕ್ಕೆ ನೀರು ತುಂಬಿಸ ಬೇಕು ಮತ್ತು ನಮ್ಮ ಭಾಗಕ್ಕೂ ಶಾಶ್ವತ ಕುಡಿಯುವ ನೀರನ್ನು ಕೊಡಬೇಕು. ಇಲ್ಲದಿದ್ದರೇ, ನಮ್ಮ ಜಮೀನನ್ನು ವಶ ಪಡಿಸಿಕೊಂಡು ನಮಗೆ ನೀರು ಕೊಡದೇ ಮೋಸ ಮಾಡುತ್ತಿರುವ ಸರ್ಕಾರದ ಉಗ್ರ ಹೋರಾಟ ನಡೆಸುತ್ತೇವೆ ಎಂದು ರೈತ ಮುಖಂಡ ಕೆ.ಟಿ ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.