ರಾಸಲೀಲೆಯ ಸಿಡಿಯಲ್ಲಿರೋದು ನಿತ್ಯಾನಂದ- ಖಚಿತ ಪಡಿಸಿದ ಎಫ್.ಎಸ್.ಎಲ್- ಮತ್ತೆ ಸಂಕಷ್ಟದಲ್ಲಿ ದೇವಮಾನವ ನಿತ್ಯಾನಂದ!!

ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ರಾಸಲೀಲೆಯ ಸಿಡಿಯಲ್ಲಿರುವುದು ನಿತ್ಯಾನಂದ ಎಂಬುದನ್ನು ಎಫ್​.ಎಸ್​.ಎಲ್​ ವರದಿ ದೃಡಪಡಿಸಿದೆ. ನಟಿಯೊಬ್ಬಳ ಜೊತೆ ನಿತ್ಯಾನಂದ ರಾಸಲೀಲೆ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 


ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ಬಳಿಕ 2010 ರಲ್ಲಿ ಅಂದಿನ ಸಿಐಡಿ ಡಿವೈಎಸ್​ಪಿ ಚರಣ್ ರೆಡ್ಡಿಗೆ ವರದಿ ಸಲ್ಲಿಕೆಯಾಗಿತ್ತು. ಈ ವೇಳೆ ಸಿಡಿಯಲ್ಲಿರುವುದು ನಿತ್ಯಾನಂದ ಎನ್ನೋದು ಮೆಲ್ನೋಟಕ್ಕೆ ಸಾಬೀತಾಗಿದ್ದರು. ಖಚಿತಪಡಿಸಿಕೊಳ್ಳಲು ಆ ಸಿಡಿಯನ್ನು ಎಫ್.ಎಸ್.ಎಲ್​ ಗೆ ಕಳುಹಿಸಲಾಗಿತ್ತು.

ಇದೀಗ ಎಫ್​.ಎಸ್.ಎಲ್​ ತನಿಖಾ ತಂಡ ಮುಚ್ಚಿದ ಲಕೋಟೆಯಲ್ಲಿ ಸಿಐಡಿಗೆ ವರದಿ ನೀಡಿದ್ದು, ಅದರಲ್ಲಿ ಇರುವುದು ನಿತ್ಯಾನಂದ ಎಂಬುದು ಖಚಿತವಾಗಿದೆ. ಹೀಗಾಗಿ ಈ ಎಫ್​.ಎಸ್.ಎಲ್ ವರದಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ. ಹೀಗಾಗಿ ನಿತ್ಯಾನಂದ ರಾಸಲೀಲೆ ನಡೆಸಿರೋದು ಬಹುತೇಕ ಖಚಿತವಾಗಿದ್ದು, ನಿತ್ಯಾನಂದನ ಶಿಕ್ಷೆ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

Watch Here: https://youtu.be/EBRTktkSGTA

1 ಕಾಮೆಂಟ್

  1. ನೀಮ್ಮ ಈ ಸುದ್ದಿ ಹಳಸಿರುವುದು. ಈ ವರದಿ ಹಳೆಯದು ನೀವು ವೀಕ್ಷ್ಕರನ್ನು ದಾರಿ ತಪ್ಪಿಸುತ್ತಿರುವಿರಿ. ಇದು ನಮ್ಮ ದೇಶದ ಎಫ್.ಎಸ್. ಎಲ್ ವರದಿ, ಇದಲ್ಲದೆ ಎಫ್. ಬಿ ಐ ವರದಿಗಳು ಇವೆ ಅವರ ತನಿಖಾ ತಂಡದವರ ಒಂದು ವರದಿ ಇಲ್ಲಿದೆ https://www.youtube.com/watch?v=fAObTmq5fUo.
    ಇದಲ್ಲದೆ ಸನ್ ಟಿವಿ ಯ ಮುಖ್ಯ ನಿರ್ವಾಹಕರ ಸಾರ್ವಜನಿಕ ಹೇಳಿಕೆಯನ್ನೂ ಕೇಳಿ. ಇದು ನಿಮಗೆ ತಿಳಿಯದಿದ್ದರೆ ನಿಮ್ಮ ದುರಂತವಷ್ಟೆ. https://www.youtube.com/watch?v=8fwXZgAY2jg.

Comments are closed.