ಆಸ್ಪತ್ರೆಗೆ ಬಂದ ನಕಲಿ ವೈದ್ಯೆ-ಮಕ್ಕಳ ಕಳ್ಳಿಯ ಸಖತ್ ಪ್ಲಾನ್!!

Fake Doctor caught to Police in Kalburgi.
Fake Doctor caught to Police in Kalburgi.

ಆಕೆ ವೈಟ್ ಕೋಟ್ ಹಾಕಿಕೊಂಡ ಅಪ್ಪಟ ವೈದ್ಯರಂತೆ ಆಸ್ಪತ್ರೆಗೆ ಬಂದಿದ್ದಳು. ಅಷ್ಟೇ ಅಲ್ಲ ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆ ತುಂಬ ವೈದ್ಯರಂತೆ ಓಡಾಡಿಕೊಂಡಿದ್ದಳು. ಮಕ್ಕಳನ್ನು ಕದಿಯುವ ಉದ್ದೇಶದಿಂದ ಆಸ್ಪತ್ರೆಗೆ ಕಾಲಿಟ್ಟಿದ್ದ ಆ ನಕಲಿ ವೈದ್ಯೆ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ.

 

Fake Doctor caught to Police in Kalburgi.
Fake Doctor caught to Police in Kalburgi.

ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಎಚ್​ಕೆಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ಯುವತಿ ಕಳೆದ ನಾಲ್ಕೈದು ದಿನಗಳಿಂದ ವೈದ್ಯರ ವೇಷದಲ್ಲಿ ಇಡೀ ಆಸ್ಪತ್ರೆಯಲ್ಲಿ ಓಡಾಡಿದ್ದಾಳೆ. ಆದರೆ ಯಾರಿಗೂ ಅನುಮಾನ ಬಂದಿಲ್ಲ. ಆದರೆ ಆಕೆ ಆಗಾಗ ಪೋನ್ ನಲ್ಲಿ ಮಾತನಾಡುತ್ತಿದ್ದುದು ಆಸ್ಪತ್ರೆಯ ವ್ಯವಸ್ಥಾಪಕರ ಕಣ್ಣಿಗೆ ಬಿದ್ದಿದೆ. ಈ ಆಸ್ಪತ್ರೆಯ ನಿಯಮದಂತೆ ಆಸ್ಪತ್ರೆಯೊಳಗೆ ಯಾವುದೇ ಸಿಬ್ಬಂದಿ ಮೊಬೈಲ್ ನಲ್ಲಿ ಮಾತನಾಡುವಂತಿಲ್ಲ.

Fake Doctor caught to Police in Kalburgi.
Fake Doctor caught to Police in Kalburgi.

ಈ ಯುವತಿ ಮೊಬೈಲ್ ಗೆ ಅಂಟಿಕೊಂಡೆ ಇದ್ದಿದ್ದನ್ನು ಗಮನಿಸಿದ ಸಿಬ್ಬಂದಿ ಆಕೆಯನ್ನು ಪ್ರಶ್ನಿಸಿದ್ದಾರೆ‌ ‌ . ಆಕೆ ಸಮರ್ಪಕ ಉತ್ತರ ನೀಡಿಲ್ಲ. ಬದಲಾಗಿ ನಿಮಿಷಕ್ಕೊಂದು ಹೇಳಿಕೆ ನೀಡಿ ಎಲ್ಲರನ್ನು ಯಾಮಾರಿಸಿದ್ದಾಳೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ಪೊಲೀಸರನ್ನು ಕರೆಯಿಸಿ ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಧ್ಯ ಎಂ.ಬಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಯುವತಿಯ ವಿವರ ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಇನ್ನು ಆಕೆಯ ಹೆಸರು ವಿಳಾಸ ಕೂಡಾ ಪತ್ತೆಯಾಗಿಲ್ಲ. ಆದರೂ ಸರಿಯಾದ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರಿಂದ ಅಗಬಹುದಾದ ಅನಾಹುತ ತಪ್ಪಿಸಿದಂತಾಗಿದೆ.

Watch Here: https://youtu.be/Twr1GMDHpHw