ಲಿಂಗದಲ್ಲಿ ಉಂಟಾದ ಬಿರುಕು,- ಭಕ್ತರಲ್ಲಿ ಆತಂಕ- ಇದು ಯಾವುದರ ಸಂಕೇತ?

ಕೂಡಲಸಂಗಮ ಬಸವಣ್ಣನ ಐಕ್ಯಸ್ಥಳದಲ್ಲಿನ ಲಿಂಗದಲ್ಲಿ ಬಿರುಕು ಮೂಡಿದ್ದು, ಭಕ್ತರಲ್ಲಿ ಆತಂಕ ಉಂಟು ಮಾಡಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮವಾಗುತ್ತೆ, ಇಲ್ಲಿಯೇ ಬಸವಣ್ಣ ಐಕ್ಯಮಂಟಪ ಇರೋದು.

ಇನ್ನು ಈ ಐಕ್ಯ ಮಂಟಪ ವೀಕ್ಷಣೆಗೆ ನಿತ್ಯ  ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಭಕ್ತರು ಲಿಂಗಕ್ಕೆ ನಾಣ್ಯಗಳನ್ನು ಎಸೆಯುವ ಕಾರಣಕ್ಕೆ ಬಿರುಕು ಬಿಟ್ಟಿದೆ ಎನ್ನಲಾಗ್ತಿದೆ. ಇತ್ತೀಚಿಗೆ ಕೆಲ ಪಟ್ಟಭದ್ರರು ಐಕ್ಯಸ್ಥಳದ ಸುತ್ತಮುತ್ತ ಮೌಡ್ಯತೆ ಬಿತ್ತರಿಸುವ ಕಾರ್ಯ ಮಾಡ್ತಿದ್ದಾರೆ ಎನ್ನುವ ಆರೋಪ ಕೂಡಾ ಕೇಳಿ ಬಂದಿದ್ದು, ಬಸವಣ್ಣನ ಐಕ್ಯಸ್ಥಳದ ಲಿಂಗದ ಸಂರಕ್ಷಣೆಗೆ ಬಸವಾಭಿನಿಗಳ ಆಗ್ರಹ ಮಾಡ್ತಿದಾರೆ.

ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರ ಗಮನ ಹರಿಸಬೇಕು. ಐಕ್ಯಸ್ಥಳ ಲಿಂಗದ ಸುತ್ತಲೂ ಪೈಬರ್ ಗ್ಲಾಸ್ ಅಳವಡಿಸುವಂತೆ ಭಕ್ತರು ಒತ್ತಾಯ ಮಾಡ್ತಿದಾರೆ..