ಮತ್ತಿನಲ್ಲಿದ್ದ ಪೊಲೀಸ್‌ನಿಗೆ ಬಿತ್ತು ಗೂಸಾ!!

Gadag: Local's Beaten Police for Indecent Behavior.

ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸನೇ ಕುಡಿದ ಮತ್ತಿನಲ್ಲಿ ಸಾರ್ವಜನಿಕರೊಂದಿಗೆ ಅನುಚಿತ ವರ್ತಿಸಿದ ಘಟನೆ ಗದಗದಲ್ಲಿ ನಡೆದಿದೆ. ಪೊಲೀಸಪ್ಪನ ವರ್ತನೆಯಿಂದ ನೊಂದ ಜನರು ಪೊಲೀಸನಿಗೆ ಧರ್ಮದೇಟು ನೀಡಿ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Gadag: Local's Beaten Police for Indecent Behavior.
Gadag: Local’s Beaten Police for Indecent Behavior.

ಗದಗದ ಮುಳುಗುಂದ ನಾಕಾದಲ್ಲಿ ಘಟನೆ ನಡೆದಿದ್ದು, ಗದಗ ಸಶಸ್ತ್ರಮೀಸಲು ಪಡೆಯ ಪೇದೆ ಚಂದ್ರಶೇಖರ್ ಲಮಾಣಿ ಧರ್ಮದೇಟು ತಿಂದ ಪೇದೆ. ಈತ ಕುಡಿದ ಮತ್ತಿನಲ್ಲಿ ಸ್ಥಳೀಯ ಕೆಲ ಮಹಿಳೆಯರು ಹಾಗೂ ಜನರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಇದನ್ನು ಗಮನಿಸಿದ ಜನರು ಆತನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

Gadag: Local's Beaten Police for Indecent Behavior.
Gadag: Local’s Beaten Police for Indecent Behavior.

ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಶಹರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Watch Here: https://youtu.be/MKJFV6XcEVY