ಗದಗ ಜಿಮ್ಸ್ ಆಸ್ಪತ್ರೆ ಎಡವಟ್ಟು ಏನು ಗೊತ್ತಾ?

ಗದಗ ಜಿಮ್ಸ್ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬಯಲಾಗಿದೆ. ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ರೋಗಿಗಳು ಕಗ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ. ಬೆಳಗ್ಗೆ 9 ಘಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ವಿದ್ಯುತ್ ಕಡಿತಗೊಂಡಿದ್ದು, ರಕ್ತ ತಪಾಸಣೆ ಕೇಂದ್ರ ಸೇರಿದಂತೆ, ನವಜಾತು ಶಿಶು ಕೇಂದ್ರ, ಐಸಿಯು, ಆಮ್ಲಜನಕ ಪೂರೈಕೆಯಲ್ಲಿ ತೀವ್ರ ತೊಂದರೆಯಾಗಿ ಮಕ್ಕಳು, ಬಾಣಂತಿಯರು ಪರದಾಡುವಂತಾಯಿತು.

ಇನ್ನು, ರಕ್ತ ತಪಾಸಣೆಗಾಗಿ ಬೆಳಗ್ಗೆಯಿಂದಲೇ ನೂರಾರು ಜನರು ಸಾಲು ಗಟ್ಟಿ ನಿಂತಿದ್ದು, ಜನರೇಟರ್​ ಕೂಡ ಬಂದ್ ಆಗಿ ಈ ಸಮಸ್ಯೆ ಉಂಟಾಗಿತ್ತು. ವಿದ್ಯುತ್ ಇಲ್ಲದ ಕಾರಣ ರೋಗಿಗಳ ಸಂಬಂಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಿಬ್ಬಂದಿಯನ್ನ ತರಾಟೆಗೆ ತಗೆದುಕೊಂಡ್ರು.