25 ಸಾವಿರಕ್ಕೆ ಬಿಕರಿಯಾಯ್ತು ಗಂಡು ಮಗು- ಹಾಸನದಲ್ಲಿ ಸದ್ದಿಲ್ಲದೇ ಕೆಲಸ ಮಾಡ್ತಿದ್ಯಾ ಮಕ್ಕಳ ಮಾರಾಟ ಜಾಲ!!

Hassan : Mother Sold her 3 months Baby for husband's treatment.
Hassan : Mother Sold her 3 months Baby for husband's treatment.

ಒಂದು ಮುದ್ದು ಮಗುವನ್ನು ಪಡೆಯೋಕೆ ದಂಪತಿಗಳು ದೇವರು, ಹರಕೆ ಅಂತೆಲ್ಲ ನೂರಾರು ಸರ್ಕಸ್​ ಮಾಡ್ತಾರೆ. ಆದರೇ ಇಲ್ಲೊಂದು ಕುಟುಂಬ ಮನೆಯ ಮುದ್ದು ಮಗುವನ್ನು ಬಡತನದ ಕಾರಣಕ್ಕೆ ಮಾರಿಕೊಂಡ ಕರುಣಾಜನಕ ಘಟನೆ ಹಾಸನದಲ್ಲಿ ನಡೆದಿದ್ದು, ಪ್ರಜ್ಞಾವಂತರನ್ನು ಬೆಚ್ಚಿಬೀಳುವಂತೆ ಮಾಡಿದೆ.

 

 Hassan : Mother Sold her 3 months Baby for husband's treatment.

Hassan : Mother Sold her 3 months Baby for husband’s treatment.

ಹಾಸನ ಜಿಲ್ಲಾ ಕಾರಾಗೃಹ ಹಿಂಭಾಗದ ಶ್ರೀನಗರ ಬಡಾವಣೆಯ ಜ್ಯೋತಿ ಎಂಬಾಕೆಗೆ ಕಳೆದ 3 ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಆದರೇ ಮನೆಯಲ್ಲಿದ್ದ ಕಿತ್ತುತಿನ್ನುವ ಬಡತನದಿಂದ ಮಗುವನ್ನು ಸಾಕಲಾಗದೇ ಗಾಯತ್ರಿ ಎಂಬಾಕೆಗೆ ತನ್ನ ಮೂರು ತಿಂಗಳ ಗಂಡು ಮಗುವನ್ನು 25 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಳು. ಈಕೆಯಿಂದ ಮಗು ಖರೀದಿಸಿದ ಗಾಯತ್ರಿ ನರ್ಸವೊಬ್ಬಳ ಸಹಾಯದಿಂದ ಈ ಮಗುವನ್ನು ಬೇಲೂರಿನ ಮಂಜುಳಾ ಎಂಬಾಕೆಗೆ ಮಾರಾಟ ಮಾಡಿದ್ದಳು.

 

 Hassan : Mother Sold her 3 months Baby for husband's treatment.

Hassan : Mother Sold her 3 months Baby for husband’s treatment.

ಇದನ್ನು ತಿಳಿದ ಯಾರೋ ಸಾರ್ವಜನಿಕರು ಈ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮೂಗರ್ಜಿ ಬರೆದಿದ್ದರು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಸಮಿತಿಯವರು, ಮಂಜುಳಾ ಎಂಬಾಕೆಯ ವಶದಲ್ಲಿದ್ದ ಮಗುವನ್ನು ರಕ್ಷಿಸಿ, ತಮ್ಮ ವಶಕ್ಕೆ ಪಡೆದಿದ್ದಾರೆ. ಯಾವುದೇ ಮಗುವನ್ನು ದತ್ತುಪಡೆಯಲು ಮಾನದಂಡಗಳಿವೆ. ಆದರೆ ಈ ಗಂಡು ಮಗು ವಿಚಾರದಲ್ಲಿ ಯಾವುದೇ ನಿಯಮಾವಳಿ ಪಾಲನೆ ಮಾಡಿಲ್ಲ. ಹೀಗಾಗಿ ಮಗುವನ್ನು ನಮ್ಮ ಸುಪರ್ದಿಗೆ ಪಡೆಯಲಾಗಿದ್ದು, ಅದರ ರಕ್ಷಣೆ ಹೊಣೆಯನ್ನು ನಾವೇ ಹೊರುತ್ತೇವೆ ಎಂದು ಕಲ್ಯಾಣ ಸಮಿತಿಯವರು ತಿಳಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಬಡತನವನ್ನೇ ದುರ್ಬಳಕೆ ಮಾಡಿಕೊಂಡು, ಕಂದಮ್ಮಗಳನ್ನು ಮಾರಾಟ ಮಾಡುವ ಜಾಲ ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದೆಯೇ ಎಂಬ ಅನುಮಾನ ಮೂಡಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

Watch Here: https://youtu.be/6Z_t9uPSakE